ಸ್ಕೂಟರ್ ಕಳವು: ಇಬ್ಬರ ಸೆರೆ
ಕಾಸರಗೋಡು: ಸ್ಕೂಟರ್ ಕಳವು ಪ್ರಕರಣದ ಇಬ್ಬರು ಆರೋಪಿಗಳನ್ನು ಕಾಸರಗೋಡು ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಶಾಜಿ ಪಟ್ಟೇರಿಯವರ ನೇತೃತ್ವದ ಪೊಲೀಸರು ಬಂಧಿಸಿದ್ದಾರೆ.
ಚೌಕಿ ಕೆ.ಕೆ.ಪುರದ ಶುಹೈಬ್ (೨೩) ಮತ್ತು ಮೀಪುಗುರಿ ಕಾಳ್ಯಾಂಗಾಡಿನ ಎ. ದಾವೂದ್ (೨೫) ಬಂಧಿತರಾದ ಆರೋಪಿಗಳು. ಮಾರ್ಚ್ ೯ರಂದು ನಗರದ ನುಳ್ಳಿಪ್ಪಾಡಿ ಆಟೋ ಮೊಬೈಲ್ ಅಂಗಡಿ ಮುಂದೆ ನಿಲ್ಲಿಸಲಾಗಿದ್ದ ಮನ್ನಿಪ್ಪಾಡಿಯ ಮಧು ಎಂಬವರ ೭೦,೦೦೦ ರೂ. ಮೌಲ್ಯದ ಸ್ಕೂಟರ್ ಕಳವು ಗೈದ ಪ್ರಕರಣಕ್ಕೆ ಸಂಬಂಧಿಸಿ ಈ ಇಬ್ಬರನ್ನು ಬಂಧಿಸಲಾಗಿದೆ. ಆ ಪರಿಸರದ ಸಿಸಿ ಟಿವಿ ಕ್ಯಾಮರಾಗಳ ದೃಶ್ಯಗಳನ್ನು ಪರಿಶೀ ಲಿಸಿ ಅದರ ಜಾಡು ಹಿಡಿದು ನಡೆಸಿದ ತನಿಖೆಯಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕದ್ದ ಸ್ಕೂಟರನ್ನೂ ಪೊಲೀಸರು ಪತ್ತೆಹಚ್ಚಿ ವಶಕ್ಕೆ ತೆಗೆದುಕೊಂಡಿದ್ದಾರೆ.