ಸ್ಕೂಟರ್-ಕಾರು ಢಿಕ್ಕಿ: ಇಬ್ಬರು ಮೃತ್ಯು ಪಾದಚಾರಿ ಸಹಿತ ೫ ಮಂದಿಗೆ ಗಾಯ
ಕಾಸರಗೋಡು: ಸ್ಕೂಟರ್ ಹಾಗೂ ಕಾರು ಢಿಕ್ಕಿ ಹೊಡೆದು ಇಬ್ಬರು ಮೃತಪಟ್ಟ ದಾರುಣ ಘಟನೆ ಇಂದು ಬೆಳಿಗ್ಗೆ ಪೆರಿಯ ಬಳಿಯ ಕುಣಿಯ ಎಂಬಲ್ಲಿ ಸಂಭವಿಸಿದೆ. ಅಪಘಾತದಲ್ಲಿ ಓರ್ವ ಪಾದಚಾರಿ ಸಹಿತ ೫ ಮಂದಿ ಗಾಯಗೊಂಡಿದ್ದಾರೆ. ಮೃತಪಟ್ಟವರು ಚಟ್ಟಂಚಾಲ್ ನಿವಾಸಿಗಳಾದ ನಾರಾ ಯಣನ್ ಹಾಗೂ ಗೋಪಾಲಕೃಷ್ಣನ್ ಎಂಬವರೆಂದು ಹೇಳಲಾಗುತ್ತಿದೆ. ಇವರು ಸಂಚರಿಸುತ್ತಿದ್ದ ಸ್ಕೂಟರ್ ಹಾಗೂ ಕಾರು ಢಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಇದೇ ವೇಳೆ ಅಪಘಾತ ಸಂಭವಿಸಿದ ರಸ್ತೆಯಲ್ಲಿ ನಡೆದು ಹೋ ಗುತ್ತಿದ್ದ ಹಂಸ ಎಂಬವರೂ ಗಾಯಗೊಂಡಿ ದ್ದಾರೆಂದು ತಿಳಿದುಬಂದಿದೆ. ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ತಲುಪಿಸಲಾಗಿದೆ.