ಸ್ಕೂಟರ್ ಢಿಕ್ಕಿ ಹೊಡೆದು ಪಾದಚಾರಿಗೆ ಗಂಭೀರ ಗಾಯ
ಕುಂಬಳೆ: ಸ್ಕೂಟರ್ ಢಿಕ್ಕಿ ಹೊಡೆದು ಪಾದಚಾರಿಯೊಬ್ಬರು ಗಂಭೀರ ಗಾಯಗೊಂಡಿದ್ದಾರೆ. ಆರಿಕ್ಕಾಡಿ ನಿವಾಸಿ ಮೋನಪ್ಪ (53) ಎಂಬವರು ಗಾಯಗೊಂಡಿದ್ದು, ಅವರನ್ನು ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ನಿನ್ನೆ ರಾತ್ರಿ ೮ಗಂಟೆಗೆ ಬಂಬ್ರಾಣ ಕಕ್ಕಳಕುನ್ನು ಎಂಬಲ್ಲಿ ಇವರು ನಡೆದು ಹೋಗುತ್ತಿದ್ದಾಗ ಸ್ಕೂಟರ್ ಢಿಕ್ಕಿ ಹೊಡೆದಿದೆ. ಇವರ ತಲೆ, ಕೈಕಾಲುಗಳಿಗೆ ಗಾಯಗಳಾಗಿವೆ ಯೆಂದು ಆಸ್ಪತ್ರೆ ಮೂಲಗಳು ತಿಳಿಸಿವೆ.