ಸ್ಕೂಟರ್ ಬೈಕ್‌ಗೆ ಢಿಕ್ಕಿ ಹೊಡೆದು ರಸ್ತೆಗೆಸೆಯಲ್ಪಟ್ಟು ಸಿಪಿಎಂ ಪ್ರಾದೇಶಿಕ ನೇತಾರ ಮೃತ್ಯು
ಮುಳ್ಳೇರಿಯ: ಬೈಕ್ ಢಿಕ್ಕಿ ಹೊಡೆದ ಪರಿಣಾಮ ರಸ್ತೆಗೆಸೆಯಲ್ಪಟ್ಟ ಸ್ಕೂಟರ್ ಸವಾರನಾದ ಸಿಪಿಎಂ ಪ್ರಾದೇಶಿಕ ನೇತಾರ ಬಸ್‌ನಡಿಯಲ್ಲಿ ಸಿಲುಕಿ ಮೃತಪಟ್ಟ ದಾರುಣ ಘಟನೆ ಸಂಭವಿಸಿದೆ.
ಪಾಂಡಿ ಬಳವಂತಡ್ಕದ ಬಿ.ಎಸ್. ತಿಮ್ಮಪ್ಪ (೬೨) ಮೃತಪಟ್ಟ ದುರ್ದೈವಿಯಾಗಿದ್ದಾರೆ. ನಿನ್ನೆ ಮಧ್ಯಾಹ್ನ ಒಂದು ಗಂಟೆ ವೇಳೆ ಬೆಳ್ಳೂರು ಬಳಿಯ ಅನೆಕ್ಕಳ ಎಂಬಲ್ಲಿ ಅಪಘಾತ ಸಂಭವಿಸಿದೆ.
ತಿಮ್ಮಪ್ಪ ಚಲಾಯಿಸುತ್ತಿದ್ದ ಸ್ಕೂಟರ್ ಎದುರಿನಿಂದ ಬರುತ್ತಿದ್ದ ಬೈಕ್‌ಗೆ ಢಿಕ್ಕಿ ಹೊಡೆದಿದೆ. ಇದರಿಂದ ಬಸ್‌ನಡಿಗೆ ತಿಮ್ಮಪ್ಪ ಎಸೆಯಲ್ಪಟ್ಟಿದ್ದಾರೆ. ಅವರ ಕಾಲಿನ ಮೇಲೆ ಹಿಂಬದಿಯ ಟಯರ್ ಚಲಿಸಿದುದರಿಂದ ಗಂಭೀರ ಗಾಯಗೊಂಡ ತಿಮ್ಮಪ್ಪರನ್ನು ಕೂಡಲೇ ಮುಳ್ಳೇರಿಯದ ಖಾಸಗಿ ಆಸ್ಪತ್ರೆಗೆ ತಲುಪಿಸಲಾಯಿತು. ಸ್ಥಿತಿ ಗಂ ಭೀರವಾಗಿದ್ದುದರಿಂದ ಕಾಸರ ಗೋಡಿನ ಆಸ್ಪತ್ರೆಗೆ ತಲುಪಿಸುವಂತೆ ವೈದ್ಯರು ತಿಳಿಸಿದ್ದರು. ಇದರಂತೆ ಕಾಸರಗೋಡಿನ ಆಸ್ಪತ್ರೆಗೆ ತಲುಪಿಸ ಲಾಯಿತಾದರೂ ಜೀವ ರಕ್ಷಿ ಸಲಾಗಲಿಲ್ಲ. ಕಿನ್ನಿಂಗಾರಿನಲ್ಲಿರುವ ಸಹೊ ದರಿಯ ಮನೆಗೆ ತೆರಳುತ್ತಿದ್ದಾಗ ತಿಮ್ಮಪ್ಪ ಅಪಘಾತಕ್ಕೀಡಾಗಿದ್ದಾರೆ. ಸಿಪಿಎಂ ಪಾಂಡಿ ಲೋಕಲ್ ಕಮಿಟಿ ಸದಸ್ಯನಾಗಿ ಕಾರ್ಯಾಚರಿಸುತ್ತಿದ್ದ ತಿಮ್ಮಪ್ಪ ಕೆಎಸ್‌ಕೆಟಿಯು ವಲಯ ಅಧ್ಯಕ್ಷರೂ ಆಗಿದ್ದಾರೆ.
ದಿ| ಸುಬ್ಬ ಪಾಟಾಳಿ-ಗೀತಮ್ಮ ದಂಪತಿಯ ಪುತ್ರನಾದ ಮೃತರು ಪತ್ನಿ ಸ್ವರ್ಣಲತ, ಸಹೋದರಿಯರಾದ ಪ್ರೇಮ, ಶಾರದ, ಸರಸ್ವತಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿ ದ್ದಾರೆ. ಅಪಘಾತ ಬಗ್ಗೆ ಆದೂರು ಪೊಲೀಸರು ಕೇಸು ದಾಖಲಿ ಸಿಕೊಂಡಿದ್ದಾರೆ.