ಸ್ಕೂಟರ್ ಮಗುಚಿ ಗಾಯಗೊಂಡಿದ್ದ ಯುವಕ ಮೃತ್ಯು
ಕಾಸರಗೋಡು: ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರ್ಯಾಂಗೋಡ್ ಸೇತುವೆ ಸಮೀಪ ಸ್ಕೂಟರ್ ನಿಯಂತ್ರಣ ತಪ್ಪಿ ಮಗುಚಿ ಬಿದ್ದು ಗಾಯಗೊಂಡಿದ್ದ ಯುವಕ ಮೃತಪಟ್ಟನು. ಕಣ್ಣೂರು ಇರಿಕ್ಕೂರ್ ಚೇವೆಡಿಕುನ್ನು ಪುದಿಯಪುರಕುನ್ನುಪುರದ ಎಂ. ಮೊಹಮ್ಮದ್ರ ಪುತ್ರ ಕೆ.ಪಿ. ನವಾಸ್ (40) ಮೃತಪಟ್ಟ ವ್ಯಕ್ತಿ.
ಮೊನ್ನೆ ಸಂಜೆ ಅಪಘಾತ ಸಂಭವಿಸಿತ್ತು. ಇದರಿಂದ ಗಂಭೀರ ಗಾಯಗೊಂಡ ಅವರನ್ನು ಕಲ್ಲಿಕೋಟೆ ಮೆಡಿಕಲ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ನವಾಸ್ ಈ ಹಿಂದೆ ಗಲ್ಫ್ನಲ್ಲಿದ್ದರು. ಅಲ್ಲಿ ಕೆಲಸ ನಿರ್ವಹಿಸುತ್ತಿದ್ದ ಸಂಸ್ಥೆಯ ಮಾಲಕನಾದ ನೀಲೇಶ್ವರ ನಿವಾಸಿಯನ್ನು ಕಾಣಲು ಬರುತ್ತಿದ್ದಾಗ ಸ್ಕೂಟರ್ ಅಪಘಾತಕ್ಕೀಡಾಗಿತ್ತು.