ಸ್ಕೂಟರ್ ಸವಾರನಿಗೆ ಕಾಡು ಹಂದಿ ತಿವಿತ: ಯುವಕ ಆಸ್ಪತ್ರೆಗೆ

ಕಾಸರಗೋಡು: ಕಾಡು ಹಂದಿ ಸ್ಕೂಟರ್‌ಗೆ ಢಿಕ್ಕಿ ಹೊಡೆದ ಪರಿಣಾಮ ಸ್ಕೂಟರ್‌ನಿಂದ ಕೆಳಗೆ ಬಿದ್ದ ಸವಾರನಿಗೆ ಅದೇ ಕಾಡು ಹಂದಿ ತಿವಿದು ಗಾಯಗೊಳಿಸಿದ ಘಟನೆ ನಡೆದಿದೆ. ಮಲ್ಲ ಪಂಚಕೋಡಿ ನಿವಾಸಿ ಸಿ. ರಾಗೇಶ್ (35) ಗಾಯಗೊಂಡ ಯುವಕ. ಗಂಭೀರ ಗಾಯಗೊಂಡ ಇವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಯೊಂ ದರಲ್ಲಿ ದಾಖಲಿಸಲಾಗಿದೆ.   ಚೆರ್ಕಳ ಪುಲಿಕುಂಡಿನಲ್ಲಿ ವಾಸಿಸುತ್ತಿದ್ದ ರಾಗೇಶ್ ಮೂರು ವರ್ಷಗಳ ಹಿಂದೆ  ತಮ್ಮ ವಾಸವನ್ನು ಮಲ್ಲದ ಪಂಚಕೋಡಿಗೆ ಬದಲಾಯಿಸಿದ್ದರು. ಇಂಟರ್‌ಲಾಕ್ ಕಾರ್ಮಿಕರಾಗಿ ರುವ ಇವರು ಕೆಲಸಕ್ಕೆ ಹೋಗಿ ಸ್ಕೂಟರ್‌ನಲ್ಲಿ ಹಿಂತಿರುಗುತ್ತಿದ್ದ ವೇಳೆ ದಾರಿ ಮಧ್ಯೆ ಸ್ಕೂಟರ್‌ಗೆ ಕಾಡು ಹಂದಿ ಢಿಕ್ಕಿ ಹೊಡೆಯಿತ್ತಲ್ಲದೆ ತಿವಿದು ಗಾಯಗೊಳಿಸಿದೆ.

You cannot copy contents of this page