ಸ್ತ್ರೀಯರು ಮನಸು ಮಾಡಿದರೆ ಬಿಜೆಪಿ ಗೆಲುವು ನಿಶ್ಚಿತ- ಸುಳ್ಯ ಶಾಸಕಿ

ಕುಂಬಳೆ: ಸ್ತ್ರೀ ಸಮೂಹಕ್ಕೆ ಬೆಂಬಲವಾಗಿ ನಿಂತಿರುವ ಮೋದಿ ಮತ್ತೆ ಪ್ರಧಾನಿ ಆಗಬೇಕಾದದ್ದು ಈ ದೇಶದ ಅಗತ್ಯವಾಗಿದೆ. ಮಹಿಳಾ ಮೀಸಲಾತಿ ಈ ದೇಶದ ಸಮಗ್ರ ಅಭಿವೃದ್ಧಿಗೆ ಪ್ರೇರಣೆ ಆಗಲಿದೆ ಎಂದು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು. ಕುಂಬಳೆ ಬ್ಯಾಂಕ್ ಹಾಲ್‌ನಲ್ಲಿ ನಿನ್ನೆ ಜರಗಿದ ಮಂಜೇಶ್ವರ ವಿ. ಸಾ ಕ್ಷೇತ್ರ ಮಹಿಳಾ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. ಕೇಂದ್ರ ಫಲಾನುಭವಿಗಳು ಮತ ನೀಡಿದರೆ ಬಿಜೆಪಿ ೪೦೦ ಸೀಟ್ ಗೆಲ್ಲಲಿದೆ ಎಂದ ಅವರು ಹೇಳಿದರು.

ರವೀಶತಂತ್ರಿ ಕುಂಟಾರು ಕೇಂದ್ರ ಯೋಜನೆಗಳ ವಿವರಣೆ ನೀಡಿದರು. ಪ್ರೇಮಲತಾ ಎಸ್. ಅಧ್ಯಕ್ಷತೆ ವಹಿಸಿದ್ದರು. ಬಾಲಕೃಷ್ಣ ಶೆಟ್ಟಿ, ಸುಧಾಮ ಗೋಸಾಡ, ಗೋಪಾಲ್ ಶೆಟ್ಟಿ ಅರಿಬೈಲು, ಆದರ್ಶ್ ಬಿ.ಎಂ., ಪುಷ್ಪ ಗೋಪಾಲನ್, ಸುನಿಲ್ ಅನಂತಪುರ ಉಪಸ್ಥಿತರಿದ್ದರು. ಆಶಾ ಸ್ವಾಗತಿಸಿ, ಮಮತಾ ಕುಲಾಲ್ ವಂದಿಸಿದರು. ಮುರಳೀಧರ ಯಾದವ್ ನಿರ್ವಹಿಸಿದರು.

ಆಶಾಲತಾ ಪೆಲಪ್ಪಾಡಿ, ಮೀರಾ ಟೀಚರ್, ವಸಂತ್ ಮಯ್ಯ, ತುಳಸಿ ಕುಮಾರಿ, ಯತೀರಾಜ್ ಶೆಟ್ಟಿ, ಶೋಭಾ ಶೆಟ್ಟಿ, ಶಶಿಕಲಾ ಮಾಡ ನೇತೃತ್ವ ನೀಡಿದರು.

RELATED NEWS

You cannot copy contents of this page