ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಕಂಟ್ರೋಲ್ ರೂಂ ಆರಂಭ
ಕಾಸರಗೋಡು: ಸ್ಥಳೀಯಾಡಳಿತ ಇಲಾಖೆ ಜೋಯಿಂಟ್ ಡೈರೆಕ್ಟರ್ರ ಕಚೇರಿಯಲ್ಲಿ ಕಂಟ್ರೋಲ್ ರೂಂ ಆರಂಭಿಸಲಾಯಿತು. ಮಳೆ ದುರಂತ ಪರಿಹಾರಕ್ಕಾಗಿ ಈ ಕಂಟ್ರೋಲ್ ರೂಂ ತೆರೆಯಲಾಗಿದೆ. 24 ಗಂಟೆಯೂ ಇದು ಕಾರ್ಯಾಚರಿಸುತ್ತಿದೆ. ಸಾಂಕ್ರಾಮಿಕ ರೋಗ, ನೆರೆ ಮೊದಲಾದವುಗಳ ಬಗ್ಗೆ ಇಲ್ಲಿಗೆ ಕರೆದು ಮಾಹಿತಿ ನೀಡಬಹುದೆಂದು ಜಿಲ್ಲಾ ಜೋಯಿಂಟ್ ಡೈರೆಕ್ಟರ್ ಜೈಸನ್ ಮ್ಯಾಥ್ಯು ತಿಳಿಸಿದ್ದಾರೆ. ಬೇಡಡ್ಕ ಪಂಚಾಯತ್ ವ್ಯಾಪ್ತಿಯ ಜನರು 9048894680, ಚೆಂಗಳ ಪಂಚಾಯತ್ ವ್ಯಾಪ್ತಿಯವರು 9496049733, ಬೆಳ್ಳೂರು ಪಂಚಾಯತ್ನವರು 9496049702, ಪೈವಳಿಕೆ ಪಂಚಾಯತ್ನವರು 9496049719, ಕಾರಡ್ಕ ಪಂಚಾಯತ್ನವರು 9496049725, ಮಧೂರು ಪಂಚಾಯತ್ನವರು 9846428480 ಎಂಬ ನಂಬ್ರಗಳಿಗೆ ಕರೆ ಮಾಡಿ ತಿಳಿಸಬಹುದು.