ಸ್ವಾಮೀಜಿ ಕಾರಿಗೆ ಹಾನಿ: ಖಂಡನೆ
ಉಪ್ಪಳ: ಎಡನೀರು ಶ್ರೀಗಳ ವಾಹನದ ವಿರುದ್ಧ ನಡೆದ ದಾಳಿಯನ್ನು ಕೊಂಡೆವೂರು ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಖಂಡಿಸಿದ್ದಾರೆ. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಶೀಘ್ರ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದ್ದಾರೆ. ಜಾತಿ ಮತ ವ್ಯತ್ಯಾಸವಿಲ್ಲದೆ ಗೌರವಿಸುವ ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರ ವಾಹನದ ವಿರುದ್ಧ ನಡೆದ ಆಕ್ರಮಣವನ್ನು ಡಿಸಿಸಿ ಅಧ್ಯಕ್ಷ ಪಿ.ಕೆ. ಫೈಸಲ್ ಖಂಡಿಸಿದ್ದಾರೆ. ಸಾಮಾಜಿಕ, ಸಾಂಸ್ಕೃತಿಕ, ಆಧ್ಯಾತ್ಮಿಕ ಚಟುವಟಿಕೆಗಳಿಗೆ ನೇತೃತ್ವ ನೀಡುವ ಸ್ವಾಮೀಜಿಯವರ ವಾಹನದ ವಿರುದ್ಧ ನಡೆದ ಆಕ್ರಮಣವನ್ನು ಎಲ್ಲಾ ಜನ ವಿಭಾಗದವರೂ ಖಂಡಿಸಬೇಕೆಂದು ಅವರು ಕರೆ ನೀಡಿದರು. ಬಿಜೆಪಿ ಮಂಜೇಶ್ವರ ಮಂಡಲ ಅಧ್ಯಕ್ಷ ಆದರ್ಶ್ ಬಿ.ಎಂ., ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಡೆಮಿಯ ಪ್ರಧಾನ ಕಾರ್ಯದರ್ಶಿ ಅಖಿಲೇಶ್ ನಗುಮುಗಂ ಸ್ವಾಮೀಜಿ ವಿರುದ್ಧ ನಡೆದ ದಾಳಿಯನ್ನು ಖಂಡಿಸಿದ್ದಾರೆ.
ಎಡನೀರು ಮಠಾಧೀಶರ ಕಾರಿಗೆ ಹಾನಿ ಖಂಡನೀಯ- ಮಲ್ಲ ಕ್ಷೇತ್ರ ಮೊಕ್ತೇಸರ
ಮಲ್ಲ: ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರ ಕಾರಿಗೆ ತಡೆಯೊಡ್ಡಿ ಹಾನಿಗೊಳಿಸಿದ ಘಟನೆ ಖಂಡನೀಯವೆಂದು ಮಲ್ಲ ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದ ಆಡಳಿತ ಮೊಕ್ತೇಸರ ಸತ್ಯನಾರಾಯಣ ಭಟ್ ಆನೆಮಜಲು ಹೇಳಿದ್ದಾರೆ.
ಈ ಪ್ರಕರಣದಲ್ಲಿ ಆರೋಪಿಯನ್ನು ಶೀಘ್ರ ಬಂಧಿಸಬೇಕೆಂದೂ, ಇಂತಹ ಘಟನೆ ಪುನರಾವರ್ತಿಸದಂತೆ ಕಾನೂನು ಪಾಲಕರು ಕ್ರಮ ಕೈಗೊಳ್ಳಬೇಕೆಂದು ಸತ್ಯನಾರಾಯಣ ಭಟ್ ಒತ್ತಾಯಿಸಿದ್ದಾರೆ.