ಹನುಮಾನ್ ನಗರ ಕಾಂಕ್ರೀಟ್ ರಸ್ತೆ ಸಮುದ್ರ ಪಾಲಾಗುವ ಭೀತಿ: ಮೀನು ಕಾರ್ಮಿಕರು ಆತಂಕದಲ್ಲಿ
ಉಪ್ಪಳ: ಕಡಲ್ಕೊರೆತ ವ್ಯಾಪಕ ಗೊಂಡಿರುವAತೆ ಉಪ್ಪಳ ಬಳಿಯ ಹನುಮಾನ್ನಗರದಲ್ಲಿ ಸಮುದ್ರ ತೀರ ರಸ್ತೆ ನೀರು ಪಾಲಾಗುವ ಸಾಧ್ಯತೆ ಕಂಡುಬರುತ್ತಿದೆ. ಈ ಪರಿಸರದ ಮೀನು ಕಾರ್ಮಿಕರು ಆತಂಕಗೊA ಡಿದ್ದಾರೆ. ಕಳೆದ ವರ್ಷ ಸರಕಾರದ ಅಭಿವೃದ್ದಿ ಫÀಂಡ್ನಿAದ ಭಾರೀ ವೆಚ್ಚದಲ್ಲಿ ಈ ಪರಿಸರದ ಸುಮಾರು ಒಂದು ಕಿಲೋ ಮೀಟರ್ ಉದ್ದಕ್ಕೆ ಕಾಂಕ್ರೀಟ್ ರಸ್ತೆಯನ್ನು ನಿರ್ಮಿಸಲಾ ಗಿದೆ. ಆದರೆ ಈ ವೇಳೆ ನಿರ್ಮಿಸಿದ ಕಗ್ಗಲ್ಲಿನ ತಡೆಗೋಡೆ ಕಳಪೆ ಕಾಮ ಗಾರಿಯಾಗಿರುವುದಾಗಿ ಸ್ಥಳೀಯರು ಆರೋಪಿಸಿದ್ದಾರೆ.
ಕಡಲ್ಕೊರೆತದಿಂದ ತಡೆಗೋಡೆ ಸಮುದ್ರ ಪಾಲಾಗುತ್ತಿದ್ದು, ನೀರು ರಸ್ತೆ ತನಕ ತಲುಪುತ್ತಿದೆ. ಇದೇ ರೀತಿ ಮುಂದುವರಿದರೆ ರಸ್ತೆ ನೀರುಪಾಲಾದಲ್ಲಿ ಪರಿಸರದ ಹಲವು ಮೀನು ಕಾರ್ಮಿಕರ ಮನೆಗಳು ಅಪಾಯದಂಚಿಗೆ ತಲುಪಲಿದೆ. ಪ್ರದೇಶದಲ್ಲಿ ಸುಮಾರು 300ರಷ್ಟು ಮೀನು ಕಾರ್ಮಿಕರ ಕುಟುಂಬ ವಾಸ ವಾಗಿದ್ದು, ರಸ್ತೆ ಸಮುದ್ರ ಪಾಲಾದಲ್ಲಿ ಕುಟುಂಬಗಳ ಕೆಲಸ ಕಾರ್ಯಗಳು ಸಂಪೂರ್ಣಮೊಟಕುಗೊಳ್ಳಲಿದೆ. ಇಲ್ಲಿನ ಮೀನುಗಾರರು ಈ ರಸ್ತೆಯನ್ನೇ ಅವಲಂಭಿಸುತ್ತಿದ್ದಾರೆ. ರಸ್ತೆ ನಷ್ಟಗೊಂಡಲ್ಲಿ ಮೀನುಗಾರರು ಭಾರೀ ತೊಂದರೆಗೆ ಸಿಲುಕಲಿದ್ದಾರೆ. ಸಂಬAಧಪಟ್ಟ ಅಧಿಕಾರಿಗಳು ವ್ಯವಸ್ಥಿತ ರೀತಿಯಲ್ಲಿ ತಡೆಗೋಡೆ ನಿರ್ಮಿಸಲು ಊರವರು ಒತ್ತಾಯಿಸಿದ್ದಾರೆ.