ಹರಡುತ್ತಿದೆ ಡೆಂಗ್ಯೂ ಜ್ವರ: ಎರಡು ವಾರದಲ್ಲಿ ಆರು ಸಾವು: 1,300 ಮಂದಿ ಚಿಕಿತ್ಸೆಯಲ್ಲಿ
ಕಾಸರಗೋಡು: ರಾಜ್ಯದಲ್ಲಿ ಡೆಂಗ್ಯೂ ಜ್ವರ ಈಗ ಮತ್ತೆ ಹರಡ ತೊಡಗಿದೆ. ಡೆಂಗ್ಯೂ ಜ್ವರಕ್ಕೆ ಕಳೆದ ಎರಡು ವಾರದಲ್ಲಿ ಆರು ಮಂದಿ ಸಾವನ್ನಪ್ಪಿದ್ದಾರೆ. ೧೩೭೩ ಮಂದಿ ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ ಈಗ ಚಿಕಿತ್ಸೆಯಲ್ಲಿದ್ದಾರೆ.
ರಾಜ್ಯದಲ್ಲಿ ಬೇಸಿಗೆ ಮಳೆಗೆ ಸಾಂಕ್ರಾಮಿಕ ರೋಗ ಹರಡಿಸುವ ಮಾರಕ ಸೊಳ್ಳೆಗಳನ್ನು ಹೆಚ್ಚುವಂತೆ ಮಾಡತೊಡಗಿ ದೆ. ಇದರಿಂದಾಗಿ ಡೆಂಗ್ಯೂ ಮಾತ್ರವಲ್ಲ ಚಿಕನ್‌ಗು ನಿಯಾ, ಮಲೇರಿಯ, ಫೈಲೇರಿಯಾ ಸಿಸ್ ಇತ್ಯಾದಿ ಸಾಂಕ್ರಾಮಿಕ ರೋ ಗಗಳು ಹರಡುವ ಸಾಧ್ಯತೆ ಇದೆಯೆಂ ದು ಆರೋಗ್ಯ ಇಲಾಖೆಯ ಅಧಿಕಾರಿ ಗಳು ಜಾಗ್ರತಾ ನಿರ್ದೇಶ ನೀಡಿದ್ದಾರೆ. ತೀವ್ರ ತಲೆನೋವು, ಜ್ವರ, ಹಸಿವಿಲ್ಲದಿ ರುವಿಕೆ, ವಾಂತಿ, ಆಯಾಸ, ಗಂಟಲು ನೋವು, ಸಣ್ಣ ಮಟ್ಟಿನ ಕೆಮ್ಮು, ಕಣ್ಣಿನ ಹಿಂದುಗಡೆ ನೋವು ಇತ್ಯಾದಿಗಳು ಡೆಂಗ ಜ್ವರಕ್ಕೆ ಆರಂಭಿಕ ಲಕ್ಷಣ ಗಳಾಗಿವೆ. ಇಂತಹ ಲಕ್ಷಣಗಳು ಅನುಭವವುಳ್ಳವರು ತಕ್ಷಣ ಸಮೀಪದ ಆಸ್ಪತ್ರೆಗೆ ಸಾಗಿ ಚಿಕಿತ್ಸೆ ಪಡೆಯಬೇಕೆಂ ದು ಆರೋಗ್ಯ ಇಲಾಖೆಯ ಅಧಿಕಾರಿಗಳು ಸಲಹೆ ನೀಡಿದ್ದಾರೆ.