ಹಲ್ಲೆ: ಮೂವರ ವಿರುದ್ಧ ಕೇಸು ದಾಖಲು

ಉಪ್ಪಳ: ತಡೆದು ನಿಲ್ಲಿಸಿ ಹಲ್ಲೆಗೈದ ಬಗ್ಗೆ ನೀಡಿದ ದೂರಿನಂತೆ ಸಂಬಂಧಿಕರಾದ ಮೂವರ ವಿರುದ್ಧ ಕೇಸು ದಾಖಲಿಸಲಾಗಿದೆ. ಉಪ್ಪಳ ಮೊಹಮ್ಮದ್ ಸ್ಟ್ರೀಟ್ ಮಜಲ್ ನಿವಾಸಿ  ಮುಹಮ್ಮದ್ ಅಪ್ಸಲ್ (57) ನೀಡಿದ ದೂರಿನಂತೆ ಸಂಬಂಧಿಕರಾದ ಶೌಕತ್‌ಅಲಿ, ಸುಹೈಲ್, ಇನ್ನೋರ್ವನ ವಿರುದ್ಧ ಕೇಸು ದಾಖಲಿಸಲಾಗಿದೆ. ಈ ತಿಂಗಳ 17ರಂದು ಸಂಜೆ 6.30ರ ವೇಳೆ ಉಪ್ಪಳ ಪೇಟೆಯಲ್ಲಿ ತಡೆದು ನಿಲ್ಲಿಸಿ ಮಾರಕಾಯುಧಗಳಿಂದ ಹಲ್ಲೆಗೈದಿರುವುದಾಗಿ ದೂರಲಾಗಿದೆ. ಸೊತ್ತು ತರ್ಕವೇ ಹಲ್ಲೆಗೆ ಕಾರಣವೆಂದು ಹೇಳಲಾಗುತ್ತಿದೆ.

Leave a Reply

Your email address will not be published. Required fields are marked *

You cannot copy content of this page