ಹವಾಮಾನ ವೈಪರೀತ್ಯ ಎದುರಿಸುವ ರೀತಿಯ ಕೃಷಿ ನೀತಿ ಅನಿವಾರ್ಯ-ಸಚಿವ
ಕಾಸರಗೋಡು: ಹವಾಮಾನ ವೈಪರೀತ್ಯವನ್ನು ಎದುರಿಸುವ ರೀತಿ ಕೃಷಿ ನೀತಿ ಅನಿವಾರ್ಯವಾಗಿದೆಯೆಂದು ರಾಜ್ಯ ಕೃಷಿ ಖಾತೆ ಸಚಿವ ಪಿ. ಪ್ರಸಾದ್ ಹೇಳಿದ್ದಾರೆ.
ಕಾಸರಗೋಡು ಕೇಂದ್ರೀಯ ತೋಟಗಾರಿಕಾ ಬೆಳೆಗಳ ಸಂಶೋಧನಾ ಕೇಂದ್ರದಲ್ಲಿ ನಿನ್ನೆ ನಡೆದ ವಿಶ್ವ ತೆಂಗು ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಸಚಿವರು ಮಾತನಾಡುತ್ತಿ ದ್ದರು. ಬಾದಾಮು ಮತ್ತು ಸೋಯಾ ಹಾಲಿಗಿಂತಲೂ ತೆಂಗಿನ ಹಾಲು ಅತ್ಯುತ್ತಮವಾದುದ್ದಾಗಿದೆ. ಉದ್ದಿಮೆಗಳ ಬೆಳವಣಿಗೆಗಾಗಿ ತೆಂಗಿನಕಾಯಿ ಆಧಾರಿತವಾಗಿರುವ ಕೃಷಿ ನೀತಿಗೆ ಆದ್ಯತೆ ನೀಡಬೇಕು. ತೆಂಗು ಕೃಷಿಗೆ ಮಾರಕವಾಗಿರುವ ಕೀಟಗಳ ಉಪಟಳಕ್ಕೆ ಪರಿಹಾರ ಕಂಡುಕೊಳ್ಳಬೇಕೆಂದು ಸಚಿವರು ಹೇಳಿದ್ದಾರೆ.
ಸಿಪಿಸಿಆರ್‌ಐ ಉಪನಿರ್ದೇಶಕ ಡಾ. ಎಸ್.ಕೆ.ಸಿಂಗ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಶಾಸಕ ಎನ್.ಎ ನೆಲ್ಲಿಕುನ್ನು ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ಸಿಪಿಸಿಆರ್‌ಐ ನಿರ್ದೇಶಕ ಡಾ. ಕೆ. ಬಾಲಚಂದ್ರ ಹೆಬ್ಬಾರ್ ನೂತನ ತಂತ್ರಜ್ಞಾನ ವಲಯದ ಸಾಧನೆಗಳ ಬಗ್ಗೆ ಮಾಹಿತಿ ನೀಡಿದರು. ಮುಖ್ಯಮಂತ್ರಿಯ ವಿಪತ್ತು ನಿರ್ವಹಣಾ ನಿಧಿಗೆ ಸಂಗ್ರಹಿಸಲಾದ 3,66,000 ರೂ.ಗಳ ಚೆಕ್‌ನ್ನು ಸಿಪಿಸಿಆರ್‌ಐ ನಿರ್ದೇಶಕರಿಂದ ಸಚಿವರು ಪಡೆದುಕೊಂಡರು.
ತಿರೂರಿನ ಪಿ.ಡಿ. ಸುಷ್ಮಾ, ಕರ್ನಾಟಕ ಕೊಂಡಾಣದ ಚಂದ್ರಶೇಖರ ಗಟ್ಟಿ ಮತ್ತು ತಮಿಳುನಾಡು ಪೊಳ್ಳಾಚಿಯ ಸೆಂಥಿಲ್ ಕುಮಾರ್ ಎಂಬೀ ತೆಂಗು ಕೃಷಿಕರು ಮತ್ತು ಉದ್ಯಮಶೀಲರಾದ ಎಚ್.ಆರ್. ನಾಗರಾಜು, ಕೃಷ್ಣನ್ ಮತ್ತು ಪಿ.ಜೆ. ಜೋಸೆಫ್‌ರನ್ನು ಇದೇ ಸಂದರ್ಭದಲ್ಲಿ ಗೌರವಿಸಲಾಯಿತು. ಉದ್ಯಮಶೀಲರನ್ನು ಇದೇ ಸಂದರ್ಭದಲ್ಲಿ ಸಿಪಿಸಿಆರ್‌ಐ ಯೊಂದಿಗೆ ಒಪ್ಪಂದ ಪತ್ರಕ್ಕೆ ಸಹಿ ಹಾಕಿದರು. ಕಲ್ಪ ಬ್ಲೀಸ್, ಅತ್ಯುತ್ತಮ ಗುಣಮಟ್ಟದ ತಳಿಗಳ ತೆಂಗಿನ ಸಸಿಗಳು ಹಾಗೂ ತೆಂಗಿನ ಹಲ್ವಾಗಳನ್ನು ಇದೇ ಸಂದರ್ಭದಲ್ಲಿ ಬಿಡುಗಡೆ ಗೊಳಿಸಲಾಯಿತು.
ಕಾಸರಗೋಡು ಉಪ್ಪಳ ನಿವಾಸಿ, ಉದ್ಯಮಶೀಲರೋರ್ವರ ಎರಡೆಡ್ ಕೋಕನಟ್ ವಾಟರ್‌ನ್ನು ಇದೇ ವೇಳೆ ಬಿಡುಗಡೆಗೊಳಿಸಲಾಯಿತು. ಹಲವು ಗಣ್ಯರು ಮಾತನಾಡಿದರು.