ಹಾನಿಗೀಡಾದ ಕೊಳವೆಬಾವಿ ದುರಸ್ತಿಗೆ ಕ್ರಮವಿಲ್ಲ : ಮಂಗಲ್ಪಾಡಿ ಪ್ರತಾಪನಗರದಲ್ಲಿ ನೀರಿನ ಸಮಸ್ಯೆ

ಉಪ್ಪಳ: ಬೇಸಿಗೆ ಕಾಲದ ಉಷ್ಣತೆ ಎಂದಿನಂತೆ ಈ ವರ್ಷವೂ ಹೆಚ್ಚತೊಡಗಿದೆ. ಇದರ ಪರಿಣಾಮ ಜಲಮೂಲಗಳೆಲ್ಲಾ ಬತ್ತತೊಡಗಿದೆ. ಬಾವಿ ಹಾಗೂ ಕೊಳವೆ ಬಾವಿಗಳಲ್ಲಿ ನೀರು ಬತ್ತಲಾರಂಭಿಸುವು ದರೊಂದಿಗೆ ನೀರಿನ ಕ್ಷಾಮ ಎಲ್ಲೆಡೆ ಕಾಣಿಸತೊಡಗಿದೆ. ಇದೇ ವೇಳೆ ಕೆಲವೆಡೆ ಧಾರಾಳ ನೀರು ಲಭಿಸುತ್ತಿದ್ದು ಸಾರ್ವಜನಿಕ ಬಾವಿ, ಕೊಳವೆ ಬಾವಿಗಳಿದ್ದರೂ ಅವುಗಳು ಹಾನಿಗೀಡಾಗಿದೆ. ಆದರೆ ಅವುಗಳನ್ನು  ದುರಸ್ತಿಗೊಳಿಸದ ಕಾರಣ ನೀರಿನ ಸಮಸ್ಯೆ ತೀವ್ರಗೊಂಡಿದೆ. ಮಂಗಲ್ಪಾಡಿ ಪಂಚಾಯತ್‌ನ ಪ್ರತಾಪನಗರ ೭ನೇ ವಾರ್ಡ್ ವ್ಯಾಪ್ತಿಯ ಶಿವಶಕ್ತಿ ಮೈದಾನ ಬಳಿ ಸಾರ್ವಜನಿಕ ಕೊಳವೆ ಬಾವಿಯೊಂದಿದೆ. ಆರಂಭದಲ್ಲಿ ಇದರಲ್ಲಿ ಧಾರಾಳ ನೀರು ಲಭಿಸುತ್ತಿತ್ತು. ಈ ನೀರನ್ನೇ ಸ್ಥಳೀಯರಾದ ಹಲವು ಕುಟುಂಬಗಳು ಉಪಯೋಗಿಸುತ್ತಿದ್ದವು. ಆದರೆ ಯಾವುದೋ ಕಾರಣದಿಂದ ಹಾನಿಗೀಡಾಗಿದೆ. ಆದರೆ ಅದನ್ನು ದುರಸ್ತಿಗೊಳಿಸಲು ಕ್ರಮವುಂಟಾಗಿಲ್ಲ.  ಕಳೆದ ಹಲವು ತಿಂಗಳಿಂದ ಇದರ ಹ್ಯಾಂಡಲ್ ತುಂಡಾಗಿರುವುದೇ ಸಮಸ್ಯೆಗೆ ಕಾರಣವಾಗಿದೆ. ಹಲವು ದಿನಗಳಿ ಗೊಮ್ಮೆ ನಳ್ಳಿ ಮೂಲಕ ನೀರು ವಿತರಣೆಯಾಗುತ್ತಿದ್ದ ಬಾವಿಯಲ್ಲೂ ನೀರಿನ ಪ್ರಮಾಣ ಕಡಿಮೆಯಾಗಿದೆ. ಇದೇ ಸ್ಥಿತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ನೀರು ಲಭಿಸದೆ ಜನರು ಪರದಾಡಬೇಕಾದ ಅವಸ್ಥೆ ಉಂಟಾಗಲಿ ದೆಯೆಂದೂ ನಾಗರಿಕರು ತಿಳಿಸುತ್ತಿದ್ದಾರೆ. ನೀರಿನ ಕ್ಷಾಮ ತೀವ್ರಗೊಳ್ಳುವ ಮೊದಲೇ ಕೆಟ್ಟು ಹೋಗಿರುವ ಕೊಳವೆ ಬಾವಿಯನ್ನು ದುರಸ್ತಿಗೊಳಿಸಲು ಕ್ರಮ ಕೈಗೊಳ್ಳಬೇಕೆಂದು ನಾಗರಿಕರು ಒತ್ತಾಯಿಸುತ್ತಿದ್ದಾರೆ.

Leave a Reply

Your email address will not be published. Required fields are marked *

You cannot copy content of this page