ಹಿಂದೂ ವಿರೋಧಿ ನೀತಿ: ವಿ.ಹಿಂ.ಪ.ದಿಂದ ಬದಿಯಡ್ಕ ಠಾಣೆ ಮಾರ್ಚ್ ನಾಳೆ
ಬದಿಯಡ್ಕ: ಬದಿಯಡ್ಕ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಲವ್‌ಜಿಹಾದ್ ಹೆಸರಲ್ಲಿ ಮತಾಂತರ ನಡೆಯುತ್ತಿದೆ ಎಂದು ಆರೋಪಿಸಿ, ಪೊಲೀಸ್ ಅಧಿಕಾರಿಗಳು ಹಿಂದೂ ವಿರೋಧಿ ನೀತಿ ಅನುಸರಿಸುತ್ತಿದ್ದಾರೆಂದು ಆರೋಪಿಸಿ ವಿಶ್ವ ಹಿಂದೂ ಪರಿಷತ್ ಬದಿಯಡ್ಕ ಪ್ರಖಂಡದ ನೇತೃತ್ವದಲ್ಲಿ ಪೊಲೀಸ್ ಠಾಣೆ ಮಾರ್ಚ್ ನಾಳೆ ನಡೆಯಲಿದೆ. ಪ್ರಖಂಡ ಅಧ್ಯಕ್ಷ ಸುನಿಲ್ ಕಿನ್ನಿಮಾಣಿ ಈ ಬಗ್ಗೆ ತಿಳಿಸಿದ್ದಾರೆ. ನಾಳೆ ಬೆಳಿಗ್ಗೆ 10 ಗಂಟೆಗೆ ಬದಿಯಡ್ಕ ಗಣೇಶ ಮಂದಿರದಿಂದ ಮಾರ್ಚ್ ಆರಂಭಗೊಳ್ಳಲಿದೆ. ಹಿರಿಯ ಮುಖಂಡರು ಭಾಗವಹಿಸಿ ಮಾತನಾಡುವರೆಂದು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಲು ಅಧ್ಯಕ್ಷರು ವಿನಂತಿಸಿದ್ದಾರೆ.