ಹಿತ್ತಿಲಲ್ಲಿ ಕಡಿದು ಹಾಕಿದ್ದ ಮರಕ್ಕೆ ಬೆಂಕಿ
ಮಂಜೇಶ್ವರ: ಹಿತ್ತಿಲಿನಲ್ಲಿ ಕಡಿದು ಹಾಕಲಾಗಿದ್ದ ಮರಕ್ಕೆ ಅಕಸ್ಮಾತ್ ಬೆಂಕಿ ತಗಲಿದ್ದು, ಉಪ್ಪಳದಿಂದ ಅಗ್ನಿಶಾಮಕ ದಳ ತಲುಪಿ ಬೆಂಕಿಯನ್ನು ನಂದಿಸಿದೆ. ಸಂಭವಿಸಬಹುದಾದ ಅಪಾಯ ತಪ್ಪಿಸಿದೆ.. ಮಂಜೇಶ್ವರ ಪಂಚಾಯತ್ ವ್ಯಾಪ್ತಿಯ ಕಾಜೂರು ನಿವಾಸಿ ಅಶೋಕ್ ಕೆ .ಟಿ ಎಂಬವರ ಹಿತ್ತಿಲಿನಲ್ಲಿ ಕಡಿದು ಹಾಕಲಾದ ಅಕೇಶಿಯ ಮರಕ್ಕೆ ನಿನ್ನೆ ಮಧ್ಯಾಹ್ನ ಬೆಂಕಿ ತಗಲಿದೆ. ಕೂಡಲೇ ಉಪ್ಪಳದ ಅಗ್ನಿಶಾಮಕ ದಳದ ಸ್ಟೇಷನ್ ಆಫೀಸರ್ ರಾಜೇಶ್.ಸಿ.ಪಿ ಹಾಗೂ ಸೀನಿಯರ್ ಆಫೀಸರ್ ಸುನಿಲ್ ಕುಮಾರ್.ಕೆ.ವಿ ನೇತೃತ್ವದಲ್ಲಿ ತೆರಳಿ ಬೆಂಕಿಯನ್ನು ನಂದಿಸಿದ್ದಾರೆ.