ಹಿರಿಯ ಕೃಷಿಕ ನಿಧನ
ಪೈವಳಿಕೆ: ಚಿಪ್ಪಾರು ಅಮ್ಮೇರಿ ನಿವಾಸಿ ಹಿರಿಯ ಕೃಷಿಕ ನಾರಾಯಣಪೂಜಾರಿ (80) ನಿಧನ ಹೊಂದಿದರು. ಮೃತರು ಮಕ್ಕಳಾದ ಸತೀಶ್ಚಂದ್ರ, ರಾಘವೇಂದ್ರ, ಜಗದೀಶ, ಹೇಮಲತ, ಅಳಿಯ ಹರೀಶ್ ಬೇಕೂರು, ಸಹೋದರರಾದ ವೆಂಕಪ್ಪ ಪೂಜಾರಿ, ಸುದಾನಂದ, ಗಂಗಯ, ರಮೇಶ, ವಿಶ್ವನಾಥ, ಸಹೋದರಿ ಸುಶೀಲ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಪತ್ನಿ ಲಲಿತ ಈ ಹಿಂದೆ ನಿಧನ ಹೊಂದಿದ್ದಾರೆ.
ಮೃತರ ಮನೆಗೆ ಸಿಪಿಎಂ ಮಂಜೇಶ್ವರ ಏರಿಯಾ ಸಮಿತಿ ಸದಸ್ಯ ಅಬ್ದುಲ್ ರಜಾಕ್ ಚಿಪ್ಪಾರು, ಚಂದ್ರ ನಾಯ್ಕ್ ಮಾನಿಪ್ಪಾಡಿ, ಖಲೀಲ್ ಚಿಪ್ಪಾರು, ರಾಜೇಶ್ ಸಹಿತ ವಿವಿಧ ರಾಜಕೀಯ, ಸಾಮಾಜಿಕ ಕಾರ್ಯಕರ್ತರು ಭೇಟಿ ನೀಡಿ ಅಂತಿಮ ನಮನ ಸಲ್ಲಿಸಿದರು. ನಿಧನಕ್ಕೆ ಸಿಪಿಎಂ ಪೈವಳಿಕೆ ಲೋಕಲ್ ಸಮಿತಿ, ಚಿಪ್ಪಾರು ಸಮಿತಿಗಳು, ಕುರುಡಪದವು ಬ್ರಾಂಚ್, ಡಿವೈಎಫ್‌ಐ, ಸಿಐಟಿಯು, ಕರ್ಷಕ ಸಮಿತಿ ಸಂತಾಪ ಸೂಚಿಸಿವೆ.