ಹಿರಿಯ ದೈವ ನರ್ತಕ ನಿಧನ
ಉಪ್ಪಳ: ಬಂಬ್ರಾಣ ಪಟ್ಟೆ ನಿವಾಸಿ ಹಿರಿಯ ದೈವ ನರ್ತಕ ಗುರುವ (65) ಸ್ವಗೃಹದಲ್ಲಿ ನಿಧನರಾದರು. ಇವರು ಹಲವು ವರ್ಷಗಳಿಂದ ದೈವ ನರ್ತಕ ರಾಗಿ ಸೇವೆಗೈಯ್ಯುತ್ತಿದ್ದರು. ಬಂಬ್ರಾಣ ಸಹಿತ ವಿವಿಧ ದೈವಸ್ಥಾನ ಗಳಲ್ಲಿ ಶ್ರೀ ಧೂಮಾವತೀ, ಅಣ್ಣಪ್ಪ ಪಂಜುರ್ಲಿ, ಕೋಮಾರು ಚಾಮುಂಡಿ ಮೊದಲಾದ ದೈವಗಳ ನರ್ತಕರಾ ಗಿದ್ದರು. ಕಳೆದ ಒಂದು ತಿಂಗಳಿಂದ ಅಸೌಖ್ಯ ಬಾಧಿಸಿತ್ತು. ಮೃತರು ಪತ್ನಿ ಶೀಲಾ, ಮಕ್ಕಳಾದ ರವಿ, ಪದ್ಮನಾಭ, ಸುಧಾ, ಅಳಿಯ ಶಿವ ಪ್ರಸಾದ್, ಸಹೋದರ ರಾದ ಚೋಮ, ಬಾಬು, ಐತ್ತಪ್ಪ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ತಂದೆ ಕೊರಗ, ತಾಯಿ ಲಿಂಗು ಈ ಹಿಂದೆ ನಿಧನರಾಗಿದ್ದಾರೆ.