ಹಿರಿಯ ವ್ಯಾಪಾರಿ ನಿಧನ
ಕುಂಬಳೆ: ಕುಂಬಳೆ ರಾಮ್‌ನಗರ ನಿವಾಸಿ ಬಳ್ಳಂಬೆಟ್ಟು ಅಚ್ಯುತ ಪೈ (೬೩) ನಿಧನ ಹೊಂದಿದರು. ಇವರು ಈ ಹಿಂದೆ ಕುಂಬಳೆ ರೈಲು ನಿಲ್ದಾಣ ರಸ್ತೆಯಲ್ಲಿ ವ್ಯಾಪಾರಿಯಾಗಿದ್ದರು. ಅನಂತರ ಬೆಂಗಳೂರಿನಲ್ಲಿರುವ ಪುತ್ರನ ಮನೆಯಲ್ಲಿದ್ದರು.
ಇತ್ತೀಚೆಗಿನಿಂದ ಅಸೌಖ್ಯ ಬಾಧಿಸಿ ಮೈಸೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದರು. ಅಲ್ಲಿ ನಿಧನ ಸಂಭವಿಸಿದೆ. ಇವರ ಪತ್ನಿ ಆಶಾ ಪೈ ಈ ಹಿಂದೆ ನಿಧನ ಹೊಂದಿದ್ದಾರೆ. ಮೃತರು ಮಕ್ಕಳಾದ ಅನಿತ, ದಿನೇಶ್ ಪೈ, ಸಹೋದರ- ಸಹೋದರಿಯರಾದ ರಾಮ್‌ದಾಸ್ ಪೈ, ಮಂಜುನಾಥ ಪೈ, ಜಯಂತಿ, ಪೂರ್ಣಿಮ ಹಾಗೂ ಅಪಾರ ಬಧು-ಮಿತ್ರರನ್ನು ಅಗಲಿದ್ದಾರೆ.