ಹಿರಿಯ ಸಿಪಿಎಂ ಮುಖಂಡ ನಿಧನ
ಹೊಸದುರ್ಗ: ಜಿಲ್ಲೆಯ ಹಿರಿಯ ಸಿಪಿಎಂ ಮುಖಂಡ ನೀಲೇಶ್ವರ ಪೇರೋಲ್ ನಿವಾಸಿ ಕೆ. ಕಣ್ಣನ್ ನಾಯರ್ (82) ನಿನ್ನೆ ರಾತ್ರಿ ನಿಧನ ಹೊಂದಿದರು. ಕಣ್ಣೂರು ಪರಿ ಯಾರಂ ಮೆಡಿಕಲ್ ಕಾಲೇಜಿನಲ್ಲಿ ಅಂತ್ಯ ಸಂಭವಿಸಿದೆ. ಹಲವು ಕಾಲ ಸಿಪಿಎಂ ಜಿಲ್ಲಾ ಸಮಿತಿ ಸದಸ್ಯ, ಮಂಜೇಶ್ವರ ಏರಿಯಾ ಕಾರ್ಯದರ್ಶಿ, ಸಿಐಟಿಯು ತಲೆಹೊರೆ ಕಾರ್ಮಿಕ ಯೂನಿಯ ನ್‌ನ ಜಿಲ್ಲಾ ಕಾರ್ಯ ದರ್ಶಿ ಸಹಿತ ಹಲವು ಪದವಿಗಳಲ್ಲಿ ಸೇವೆಗೈದಿದ್ದರು. ವಿವಿಧ ಹೋರಾಟ ಗಳಲ್ಲಿ ಭಾಗವಹಿಸಿ ಹಲವಾರು ಬಾರಿ ಜೈಲುವಾಸ ಅನುಭವಿಸಿದ್ದಾರೆ. ಕಲಾ, ಸಾಂಸ್ಕೃತಿಕ ರಂಗದಲ್ಲೂ ಸಕ್ರಿಯ ರಾಗಿದ್ದರು. ಐದರಷ್ಟು ಕವನ ಸಂಕಲನ ಪ್ರಕಟಿಸಿದ್ದಾರೆ.
ಮೃತರು ಪತ್ನಿ ಲಕ್ಷ್ಮಿ, ಪುತ್ರ ಉಣ್ಣಿಕೃಷ್ಣನ್,ಸೊಸೆ ನೀತು, ಸಹೋದರರಾದ ಕೆ. ಮಾಲಿಂಗನ್ ನಾಯರ್, ಕೆ. ಕೃಷ್ಣನ್ ನಾಯರ್, ಮಾಧವನ್ ನಾಯರ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.