ಹೃದಯಾಘಾತದಿಂದ ವ್ಯಾಪಾರಿ ನಿಧನ
ಉಪ್ಪಳ: ಹೊಸಂಗಡಿಯಲ್ಲಿ ವ್ಯಾಪಾರಿಯಾಗಿರುವ ಬೆಜ್ಜಕೊಡಿಂಚಿಲ್ ನಿವಾಸಿ ಅಶ್ವಿನ್ ಭಂಡಾರಿ (48) ಹೃದ ಯಾಘಾತದಿಂದ ನಿಧನ ಹೊಂದಿದರು. ಇವರಿಗೆ ನಿನ್ನೆ ಬೆಳಿಗ್ಗೆ ಮನೆಯಲ್ಲಿ ಹೃದಯಾಘಾ ತವುಂ ಟಾಗಿದ್ದು, ಕೂಡಲೇ ನಿಧನ ಸಂಭವಿಸಿದೆ ಎಂದು ಮನೆಯವರು ತಿಳಿಸಿದ್ದಾರೆ. ಅಶ್ವಿನ್ ಭಂಡಾರಿ ಹೊಸಂಗಡಿ ಪೇಟೆಯಲ್ಲಿ ಮೊಬೈಲ್ ಫೋನ್ ವ್ಯಾಪಾರಿಯಾಗಿದ್ದರು. ರಾಜಾರಾಮ ಭಂಡಾರಿ- ವಿಜಯ ದಂಪತಿಯ ಪುತ್ರನಾದ ಮೃತರು ಪತ್ನಿ ಮನೀಶ, ಮಕ್ಕಳಾದ ಅಶ್ವಿತ, ಅರ್ಜುನ್, ಸಹೋದರಿ ಉಷಾ ಶೆಟ್ಟಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಮೃತದೇಹದ ಅಂತ್ಯ ಸಂಸ್ಕಾರ ಕೌಡೂರುಬೀಡು ತರವಾಡು ಮನೆ ಪರಿಸರದಲ್ಲಿ ನಡೆಯಿತು.