ಹೃದಯಾಘಾತ: ಕೂಲಿ ಕಾರ್ಮಿಕ ನಿಧನ
ಉಪ್ಪಳ: ಬಂದ್ಯೋಡು ಅಡ್ಕ ವೀರನಗರ ನಿವಾಸಿ ದಿ| ಕೃಷ್ಣಪ್ಪ ಎಂಬವರ ಪುತ್ರ ಕೂಲಿ ಕಾರ್ಮಿಕ ರಾಮಚಂದ್ರ (55) ನಿಧನ ಹೊಂದಿದರು. ನಿನ್ನೆ ಮುಂಜಾನೆ ಮನೆಯಲ್ಲಿ ಹೃದಯಾಘಾತವುಂಟಾಗಿದ್ದು, ಕೂಡಲೇ ಬಂದ್ಯೋಡು ಖಾಸಗಿ ಆಸ್ಪತ್ರೆಗೆ ಕೊಂಡುಹೋಗುವ ಮಧ್ಯೆ ನಿಧನ ಸಂಭವಿಸಿದೆ. ಈ ಹಿಂದೆ ಮನೆ ಬಳಿ ಸೋಡ ತಯಾರಿಸಿ ಮಾರಾಟ ಮಾಡುತ್ತಿದ್ದರು. ಮೃತರು ತಾಯಿ ಕಮಲ, ಪತ್ನಿ ಮಾಲತಿ, ಮಕ್ಕಳಾದ ಶೈಲೇಶ್, ಅಂಕಿತ್, ಹರ್ಷಿತ, ಸೊಸೆಯಂದಿರಾದ ವಿಸ್ಮಿತ, ಮಂಜುಷ, ಸಹೋದರರಾದ ಆನಂದ, ಸದಾನಂದ, ರಾಜ, ಸಹೋದರಿ ಶಾಂಭವಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಮೃತರ ಮನೆಗೆ ಬ್ಲೋಕ್ ಪಂ. ಸದಸ್ಯೆ ಅಶ್ವಿನಿ ಎಂ.ಎಲ್, ಮಂಗಲ್ಪಾಡಿ ಪಂ. ಸದಸ್ಯ ಕಿಶೋರ್, ಬಿಜೆಪಿ ಮುಖಂಡರು, ಕಾರ್ಯಕರ್ತರು ಭೇಟಿ ನೀಡಿ ಅಂತಿಮ ನಮನ ಸಲ್ಲಿಸಿದರು.
ನಿಧನಕ್ಕೆ ಜನನಿ ಆರ್ಟ್ಸ್ ಆಂಡ್ ಸ್ಪೋರ್ಟ್ಸ್ ಕ್ಲಬ್, ತರುಣ ಕಲಾವೃಂದ, ಶ್ರೀ ನಾಗರಕ್ತೇಶ್ವರಿ ಗುಳಿಗಜ್ಜ, ಕೊರಗಜ್ಜ ಸಾನ್ನಿಧ್ಯ ಸಮಿತಿ ವೀರನಗರ ಸಂತಾಪ ಸೂಚಿಸಿದೆ.