ಹೃದಯಾಘಾತ : ನೆಲ್ಲಿಕುಂಜೆ ನಿವಾಸಿ ನಿಧನ
ಕಾಸರಗೋಡು: ಮಂಗಳೂರಿನ ವಿಕ್ರಮ್ ಟ್ರಾವೆಲ್ಸ್ನಲ್ಲಿ ಟೂರ್ ಮೆನೇಜರ್ ಆಗಿದ್ದ ನೆಲ್ಲಿಕುಂಜೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಸಮೀಪ ನಿವಾಸಿ ಸುಮಂತ್ (56) ನಿಧನ ಹೊಂದಿದರು. ನಿನ್ನೆ ರಾತ್ರಿ ಮನೆಯಲ್ಲಿ ಅಸ್ವಸ್ಥರಾಗಿದ್ದ ಇವರನ್ನು ಆಸ್ಪತ್ರೆಗೆ ಸಾಗಿಸಿದರೂ ಜೀವ ರಕ್ಷಿಸಲು ಸಾಧ್ಯವಾ ಗಲಿಲ್ಲ. ಹೃದ ಯಾಘಾತ ನಿಧನಕ್ಕೆ ಕಾರಣವೆನ್ನ ಲಾಗಿದೆ. ಅವಿವಾಹಿತರಾ ಗಿದ್ದರು. ತಂದೆ ಕೃಷ್ಣಪ್ಪ, ತಾಯಿ ರುಕ್ಮಿಣಿ ಈ ಹಿಂದೆ ನಿಧನಹೊಂದಿದ್ದಾರೆ.
ಮೃತರು ಸಹೋದರ ಸುಕೀರ್ತಿ, ಸಹೋದರಿಯರಾದ ಶೈಲಜಾ, ನೀತಾ, ಸುರೇಖಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.
ನಿಧನಕ್ಕೆ ನೆಲ್ಲಿಕುಂಜೆ ಫ್ರೆಂಡ್ಸ್ ಸರ್ಕಲ್ ಸಂತಾಪ ಸೂಚಿಸಿದೆ.