ಹೆಚ್ಚುತ್ತಿರುವ ಕಳವು : ತನಿಖೆಗಾಗಿ ಮೂರು ವಿಶೇಷ ಪೊಲೀಸ್ ಸ್ಕ್ವಾಡ್ ರಚನೆ
ಕಾಸರಗೋಡು: ಮಳೆಯ ಮರೆಯಲ್ಲಿ ಜಿಲ್ಲೆಯಲ್ಲಿ ಕಳ್ಳರ ಹಾವಳಿ ತೀವ್ರಗೊಳ್ಳುತ್ತಿದ್ದು, ಕಳ್ಳರ ಜಾಲವನ್ನು ಪತ್ತೆಹಚ್ಚಲು ಮೂರು ವಿಶೇಷ ಪೊಲೀಸ್ ಸ್ಕ್ವಾಡ್‌ಗಳಿಗೆ ರೂಪು ನೀಡಲಾಗಿದೆ.
ಕಾಸರಗೋಡು ಜಿಲ್ಲಾ ನ್ಯಾಯಾಲಯ ಹಾಗೂ ಕುಂಬಳೆ ಸಹಕಾರಿ ಬ್ಯಾಂಕ್‌ನಲ್ಲಿ ಕಳವಿಗೆ ಯತ್ನ, ಮೊಗ್ರಾಲ್‌ನಲ್ಲಿರುವ ಸೌತ್ ಇಂಡಿಯನ್ ಬ್ಯಾಂಕ್‌ನ ಎಟಿಎಂ ದರೋಡೆಯತ್ನ, ಚೆಂಗಳ ನಾಲ್ಕನೇ ಮೈಲಿನ ವೆಸ್ಟರ್ನ್ ಸೋ ಮಿಲ್ (ಮರದ ಗಿರಣಿ)ಯಿಂದ 2.75 ಲಕ್ಷ ರೂ. ಕಳವು, ನಾಯಮ್ಮಾರ್ ಮೂಲೆ ತನ್‌ಬೀಹುಲ್ ಇಸ್ಲಾಂ ಹೈಯರ್ ಸೆಕೆಂಡರಿ ಶಾಲೆಯ ಕಚೇರಿಯಲ್ಲಿ ಕಳವಿಗೆ ಯತ್ನ ಹಾಗೂ ಹೊಸದುರ್ಗ ತಾಲೂಕಿನ ವಿವಿಧೆಡೆಗಳಲ್ಲಿ ಕಳೆದ ಕೆಲವು ದಿನಗಳಲ್ಲಿ ಕಳವು ನಡೆದಿತ್ತು. ಈ ಕಳವು ಪ್ರಕರಣಗಳ ಕೆಲವೊಂದು ಆರೋಪಿಗಳ ಫೋಟೋ ಅಲ್ಲಿನ ಸಿಸಿಟಿವಿ ಕ್ಯಾಮರಾಗಳಲ್ಲಿ ಗೋಚರಿ ಸಿದೆ. ಅದರ ಜಾಡು ಹಿಡಿದು ಪೊಲೀಸರು ಕಳ್ಳರ ಪತ್ತೆಗಾಗಿರುವ ಶೋಧ ಕಾರ್ಯಾಚರಣೆ ತೀವ್ರಗೊಳಿಸಿದ್ದಾರೆ.
ಕಳ್ಳರ ಪತ್ತೆಗಾಗಿ ಕಾಸರಗೋಡು ಡಿವೈಎಸ್‌ಪಿ ಸಿ.ಕೆ. ಸುನಿಲ್ ಕುಮಾರ್‌ರ ನೇತೃತ್ವದಲ್ಲಿ ಮೂರು ವಿಶೇಷ ಪೊಲೀಸ್ ಸ್ಕ್ವಾಡ್‌ಗಳನ್ನು ರಚಿಸಲಾಗಿದೆ.