ಹೆದ್ದಾರಿ ಅಭಿವೃದ್ಧಿ: ಬಂದ್ಯೋಡ್‌ನಲ್ಲಿ ಕಾಮಗಾರಿ ಪ್ರಗತಿಯಲ್ಲಿ
ಉಪ್ಪಳ: ತಲಪಾಡಿಯಿಂದ ಚೆಂಗಳ ತನಕದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಭರದಿಂದ ನಡೆಯುತ್ತಿದ್ದು, ಬಂದ್ಯೋಡಿನಲ್ಲಿ ಹೆದ್ದಾರಿಯನ್ನು ಅಗೆದು ತೆಗೆಯಲಾಗಿದೆ. ಹೊಸಂಗಡಿ ಹಾಗೂ ಬಂದ್ಯೋಡ್‌ನಲ್ಲಿ ಹೆದ್ದಾರಿ ಸರ್ವೀಸ್ ರಸ್ತೆಯಿಂದ ಕೆಳಸ್ತರದಲ್ಲಿ ಸಾಗುತ್ತಿದ್ದು, ಇಲ್ಲಿ ಹೊಂಡ ತೆಗೆಯಲಾಗುತ್ತಿದೆ. ಸುಮಾರು ಒಂದು ಕಿಲೋ ಮೀಟರ್‌ನೊಳಗೆ ಹೊಂಡ ತೆಗೆಯಲಾಗುತ್ತಿದೆ. ಸರ್ವೀಸ್ ರಸ್ತೆಗೆ ಸೇತುವೆ ನಿರ್ಮಾಣವಾಗಬೇಕಾಗಿದೆ.
ರಾಷ್ಟ್ರೀಯ ಹೆದ್ದಾರಿಯಲ್ಲಿ ತಲಪಾಡಿಯಿಂದ ಚೆಂಗಳದವರೆಗೆ ಎಂಟು ಸೇತುವೆಗಳು, ಎರಡು ಫ್ಲೈಓವರ್ ನಿರ್ಮಾಣವಾಗಲಿದೆ. ಇದರಲ್ಲಿ ಪೊಸೋಟು, ಕುಕ್ಕಾರ್, ಕುಂಬಳೆ ಸೇತುವೆ ಕಾಮಗಾರಿ ಪೂರ್ತಿಗೊಂಡಿದೆ. ಹೆಚ್ಚಿನ ಕಡೆಗಳಲ್ಲಿ ಸರ್ವೀಸ್ ರಸ್ತೆಯ ಕೆಲಸವೂ ಪೂರ್ತಿಗೊಂಡು ವಾಹನ ಸಂಚರಿಸುತ್ತಿದೆ.