ಹೆದ್ದಾರಿ ಬದಿಯಲ್ಲಿ ಬೃಹತ್ ವಾಹನಗಳ ನಿಲುಗಡೆ: ಅಪಘಾತ ಭೀತಿ
ಮಂಜೇಶ್ವರ: ನೂತನ ಷಟ್ಪಥ ಹೆದ್ದಾರಿ ಆರಂಭಗೊಂಡ ಬಳಿಕ ಬೃಹತ್ ವಾಹನಗಳನ್ನು ರಸ್ತೆ ಬದಿಗಳಲ್ಲಿ ಅನಧಿಕೃತವಾಗಿ ನಿಲುಗಡೆಗೊಳಿಸುತ್ತಿರುವುದು ಇತರ ವಾಹನಗಳ ಸಂಚಾರಕ್ಕೆ ಸಮಸ್ಯೆ ಯಾಗುತ್ತಿದೆ. ತಲಪಾಡಿಯಿಂದ ಹೊಸಂಗಡಿ ತನಕದ ಹೆದ್ದಾರಿ ಬದಿಗಳಲ್ಲಿ ಅಡುಗೆ ಅನಿಲ ಹೇರಿ ಸಾಗುವ ಟ್ಯಾಂಕರ್ ಲಾರಿಗಳು ನಿಲುಗಡೆಯಾಗುತ್ತಿರುವುದು ನಿತ್ಯ ಘಟನೆಯಾಗಿದ್ದು, ಇದು ಇತರ ವಾಹನಗಳ ಅಪಘಾತಕ್ಕೆ ಕಾರಣವಾಗುತ್ತಿದೆ ಎನ್ನಲಾಗಿದೆ. ಬೈಪಾಸ್ ಇರುವ ಸ್ಥಳಗಳಲ್ಲಿ ರಾತ್ರಿ ವೇಳೆಗಳಲ್ಲಿ ಸಿಗ್ನಲ್‌ಗಳನ್ನು ಹಾಕದೆ ಕತ್ತಲಲ್ಲಿ ನಿಲುಗಡೆಗೊಳಿಸುತ್ತಿರು ವುದು ಅಪಾಯಕ್ಕೆ ಕಾರಣವೆನ್ನ ಲಾಗಿದೆ. ಈ ಮೊದಲು ಈ ರೀತಿ ವಾಮಂಜೂರು ಚೆಕ್‌ಪೋಸ್ಟ್ ಹೆದ್ದಾರಿ ಬದಿಯಲ್ಲಿ ನಿಲುಗಡೆಯಾ ಗುತ್ತಿದ್ದ ವಾಹನಗಳ ಹಿಂಭಾಗಕ್ಕೆ ಢಿಕ್ಕಿ ಹೊಡೆದು ಹಲವು ಬಾರಿ ಅಪಘಾತ ಸಂಭವಿಸಿದೆ. ನೂತನ ರಸ್ತೆಯಲ್ಲಿ ಅಪರಿಮಿತ ವೇಗದಲ್ಲಿ ವಾಹನಗಳು ಸಂಚರಿಸುತ್ತಿದ್ದು ನಿಲುಗಡೆ ವಾಹನ ಗೋಚರಿಸದೆ ಢಿಕ್ಕಿ ಹೊಡೆದು ಪ್ರಾಣ ಬಲಿಯಾಗುವ ಸಾಧ್ಯತೆಯೂ ಕಂಡು ಬರುತ್ತಿದೆ. ಈ ರೀತಿ ಅನಧಿಕೃತ ನಿಲುಗಡೆ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.