ಹೆಲ್ಮೆಟ್‌ನಿಂದ ಬಸ್ ಚಾಲಕನಿಗೆ ಹಲ್ಲೆ
ಕಾಸರಗೋಡು: ಸೈಡ್ ಕೊಡುವ ವಿಷಯದಲ್ಲಿ ಬಸ್ ಚಾಲಕನ ಮೇಲೆ ಬೈಕ್ ಸವಾರ ಹೆಲ್ಮೆಟ್‌ನಿಂದ ಹಲ್ಲೆ ನಡೆಸಿದ ಬಗ್ಗೆ ದೂರು ನೀಡಲಾಗಿದೆ.
ಖಾಸಗಿ ಬಸ್ ಚಾಲಕ ಚೆರ್ಕಳ ಕೋಲಾಚಿಯಡ್ಕ ನಿವಾಸಿ ಅಹ ಮ್ಮದ್ ಕಬೀರ್ (35) ಎಂಬವರ ಮೇಲೆ ಹಲ್ಲೆ ನಡೆಸಲಾಗಿದ್ದು, ಆ ಬಗ್ಗೆ ಅವರು ನೀಡಿದ ದೂರಿನಂತೆ ಬೈಕ್ ಸವಾರ ಅಣಂಗೂರು ನಿವಾಸಿ ಮುಹಮ್ಮದ್ ರೊಯಾಸ್ (30) ಎಂಬಾತನ ವಿರುದ್ಧ ವಿದ್ಯಾನಗರ ಪೊಲೀಸರು ಪ್ರಕರಣ ದಾಖಲಿಸಿಕೊಂ ಡಿದ್ದಾರೆ. ತಾನು ಚಲಾಯಿಸುತ್ತಿದ್ದ ಬಸ್ ಚೆರ್ಕಳದಿಂದ ಕಾಸರಗೋಡಿಗೆ ಬರುತ್ತಿದ್ದ ವೇಳೆ ಬೈಕ್‌ಗೆ ಸೈಡ್ ಕೊಟ್ಟಿಲ್ಲವೆಂಬ ಕಾರಣದಿಂದ ಆರೋಪಿ ನಿನ್ನೆ ಬೈಕ್‌ನ್ನು ವಿದ್ಯಾನಗರದಲ್ಲಿ ಬಸ್ಸಿಗೆ ಅಡ್ಡವಾಗಿ ನಿಲ್ಲಿಸಿ ಹೀನಾಯವಾಗಿ ಬೈದು ಹೆಲ್ಮೆಟ್‌ನಿಂದ ತನ್ನ ತಲೆಗೆ ಹೊಡೆದನೆಂದೂ ಮಾತ್ರವಲ್ಲ ಬಸ್ ಸಂಚಾರಕ್ಕೆ ಅಡಚಣೆ ಸೃಷ್ಟಿಸಿದನೆಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಅಹಮ್ಮದ್ ಕಬೀರ್ ಆರೋಪಿಸಿದ್ದಾರೆ.