ಹೈಮಾಸ್ಟ್ ಲೈಟ್‌ನಲ್ಲಿ ಅವ್ಯವಹಾರ: ಸಂಸದರ ವಿರುದ್ಧ ತನಿಖೆಗೆ ಎಲ್‌ಡಿಎಫ್ ಆಗಹ; ಡಿಫಿಯಿಂದ ನಾಳೆ ಮಾರ್ಚ್
ಕಾಸರಗೋಡು: ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಕಳೆದ ಐದು ವರ್ಷಗಳಲ್ಲಿ ಎಂ.ಪಿ ನಿಧಿಯಿಂದ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಇನ್ನೂರ ಮೂವತ್ತಾರು ಹೈಮಾಸ್ಟ್ ದೀಪಗಳನ್ನು ಸ್ಥಾಪಿಸಿದ್ದು ಪ್ರತಿಯೊಂ ದಕ್ಕೂ ಒಂದು ಲಕ್ಷ ರೂಪಾಯಿಯಂತೆ ಸಂಸದರು ಕಮಿಶನ್ ಪಡೆದಿದ್ದಾರೆ ಹಾಗೂ ಅದರ ದಾಖಲೆ ನನ್ನಲ್ಲಿದೆ ಎಂದು ಕೆಪಿಸಿಸಿ ಕಾರ್ಯದರ್ಶಿ ಹಾಗೂ ಸಂಸದರ ಒಡನಾಡಿಯಾಗಿದ್ದ ಪೆರಿಯ ಬಾಲಕೃಷ್ಣನ್ ನೀಡಿರುವ ಹೇಳಿಕೆ ಅತೀವ ಗೌರವತರವಾಗಿದೆಯೆಂದು ಎಡರಂಗದ ಕಾಸರಗೋಡು ಜಿಲ್ಲಾ ಸಂಚಾಲಕ ಕೆ.ಪಿ. ಸತೀಶ್ಚಂದ್ರನ್ ತಿಳಿಸಿದ್ದಾರೆ. ಈ ಹೇಳಿಕೆ ಕುರಿತು ಹಾಗೂ ಇದರಲ್ಲಿ ನಡೆದ ಭ್ರಷ್ಟಾಚಾರ ಹಗರಣದ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದ್ದಾರೆ.
ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್‌ರ ವಿರುದ್ಧ ಬಾಲಕೃಷ್ಣ ಪೆರಿಯ ಹೊರಿಸಿದ ಆರೋಪದ ಹಿನ್ನೆಲೆಯಲ್ಲಿ ಸಂಸದರ ವಿರುದ್ಧ ವಿಜಿಲೆನ್ಸ್ ತನಿಖೆ ನಡೆಸಬೇಕೆಂದು ಆಗ್ರಹಿಸಿ ಡಿವೈಎಫ್‌ಐ ಹೋರಾಟಕ್ಕೆ ಮುಂದಾಗಿದೆ. ಇದರ ಮೊದಲ ಹಂತವಾಗಿ ಸಂಸದರ ಕಾಞಂಗಾಡ್ ನಲ್ಲಿರುವ ವಸತಿಗೆ ನಾಳೆ ಮಾರ್ಚ್ ನಡೆಸಲು ಡಿಫಿ ತೀರ್ಮಾನಿಸಿದೆ.