ಹೊಟ್ಟೆನೋವು : ಎಸ್ಎಸ್ಎಲ್ಸಿ ಪರೀಕ್ಷೆ ಬರೆದ ವಿದ್ಯಾರ್ಥಿನಿ ಮೃತ್ಯು
ಕಾಸರಗೋಡು: ಎಸ್ಎಸ್ ಎಲ್ಸಿ ಪರೀಕ್ಷೆ ಬರೆದ ವಿದ್ಯಾ ರ್ಥಿನಿಯೋರ್ವೆ ಹೊಟ್ಟೆನೋವಿ ನಿಂದಾಗಿ ಮೃತಪಟ್ಟ ಘಟನೆ ನಡೆದಿದೆ. ದೇಳಿ ಸಅದಿಯ ಹೈಸ್ಕೂ ಲ್ನ ೧೦ನೇ ತರಗತಿ ವಿದ್ಯಾರ್ಥಿನಿ ಫಾತಿಮತ್ ಫರಿಯ (೧೫) ಮೃತಪಟ್ಟ ವಿದ್ಯಾರ್ಥಿನಿ. ಈಕೆ ದ.ಕ. ಜಿಲ್ಲೆಯ ಕುದ್ಮಾರು ನಿವಾಸಿ ಕುಂಞಿಮೋನು ಎಂಬವರ ಪುತ್ರಿಯಾಗಿದ್ದು, ನಿನ್ನೆ ಪರೀಕ್ಷೆ ಬರೆದಿದ್ದಾಳೆ. ಹೊಟ್ಟೆನೋ ವು ಹಿನ್ನೆಲೆಯಲ್ಲಿ ಈಕೆಗೆ ಪರೀಕ್ಷೆ ಬರೆಯಲು ಪ್ರತ್ಯೇಕ ವ್ಯವಸ್ಥೆ ಶಾಲೆಯಲ್ಲಿ ಮಾಡಲಾಗಿತ್ತೆನ್ನಲಾ ಗಿದೆ. ಇದುವರೆಗೆ ನಾಲ್ಕು ಪರೀಕ್ಷೆ ಬರೆದಿರುವ ಈಕೆ ಮುಂದಿನ ೫ ಪರೀಕ್ಷೆ ಬರೆಯದಂತೆ ವಿಧಿ ಈಕೆಯನ್ನು ಕಸಿದುಕೊಂಡಿದೆ. ನಿನ್ನೆ ಸಂಜೆ ಹೊಟ್ಟೆ ನೋವು ತೀವ್ರ ಗೊಂಡ ಹಿನ್ನೆಲೆಯಲ್ಲಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ನಿಧನ ಸಂಭವಿಸಿದೆ.