ಹೊಯ್ಗೆ ಕಡವಿನ ಕಚೇರಿಗೆ ನುಗ್ಗಿದ ಕಳ್ಳರು
ಕುಂಬಳೆ: ಆರಿಕ್ಕಾಡಿ ಕೋಟೆಯ ಅಧೀನತೆ ಯಲ್ಲಿರುವ ಹೊಯ್ಗೆ ಕಡವಿನ ಕಚೇರಿಗೆ ಕಳ್ಳರು ನುಗ್ಗಿರುವು ದಾಗಿ ತಿಳಿದುಬಂದಿದೆ. ಶಿರಿಯ ಹೊಳೆ ಸಮೀಪ ವಿರುವ ಕಚೇರಿಯ ಬಾಗಿಲಿನ ಬೀಗ ಮುರಿದು ಒಳನುಗ್ಗಿದ ಕಳ್ಳರು ಎಲ್ಲೆಡೆ ಚೆಲ್ಲಾಪಿಲ್ಲಿ ಗೊಳಿಸಿದ್ದಾರೆ. ಕಚೇರಿಯಲ್ಲಿ ಲ್ಯಾಪ್‌ಟಾಪ್, ಪ್ರಿಂಟರ್, ಪಾಸ್ ಮೊದಲಾದ ವುಗಳು ಇದ್ದು ಅವುಗಳನ್ನು ಕಳವು ನಡೆಸಿಲ್ಲ. ಹಣಕ್ಕಾಗಿ ಕಳ್ಳರು ಜಾಲಾ ಡಿರಬಹುದೆಂದೂ ಅದು ಸಿಗದಿದ್ದಾಗ ಬರಿಗೈ ಯಲ್ಲಿ ವಾಪಸಾಗಿರ ಬಹು ದೆಂದು ಅಂದಾಜಿಸಲಾಗಿದೆ. ನಿನ್ನೆ ರಾತ್ರಿ ಕಳ್ಳರು ನುಗ್ಗಿರಬಹುದೆಂದು ಅಂದಾಜಿಸಲಾಗಿದೆ. ಇಂದು ಬೆಳಿಗ್ಗೆ ನೌಕರರು ತಲುಪಿದಾಗ ಘಟನೆ ಅರಿವಿಗೆ ಬಂದಿದೆ. ಈ ಬಗ್ಗೆ ಕಚೇರಿಯ ಸುಪರ್‌ವೈಸರ್ ಕೆ.ಎಂ. ಅಬ್ಬಾಸ್ ನೀಡಿದ ದೂರಿನಂತೆ ಕುಂಬಳೆ ಪೊಲೀಸರು ಸ್ಥಳಕ್ಕೆ vಲುಪಿ ಪರಿಶೀಲನೆ ಆರಂಭಿಸಿದ್ದಾರೆ.