ಹೊಯ್ಗೆ ಸಾಗಾಟ: ಓರ್ವ ಸೆರೆ ; ಇನ್ನೋರ್ವ ಚಾಲಕ ವಾಹನ ಬಿಟ್ಟು ಪರಾರಿ
ಉಪ್ಪಳ: ಅನಧಿಕೃತವಾಗಿ ಹೊಯ್ಗೆ ಸಾಗಾಟ ಮತ್ತೆ ತೀವ್ರಗೊಂ ಡಿದ್ದು, ಇದರ ವಿರುದ್ಧ ಪೊಲೀಸ್ ಕಾರ್ಯಾಚರಣೆಯನ್ನು ಬಿಗುಗೊಳಿಸಲಾಗಿದೆ.
ನಿನ್ನೆ ಸಂಜೆ ಓಮ್ನಿ ವ್ಯಾನ್‌ನಲ್ಲಿ ಸಾಗಿಸುತ್ತಿದ್ದ ಹೊಯ್ಗೆಯನ್ನು ಪತ್ವಾಡಿ ರಸ್ತೆಯಿಂದ ವಶಪಡಿಸ ಲಾಗಿದೆ. ಮಂಜೇಶ್ವರ ಎಸ್.ಐ ಸುಮೇಶ್ ನೇತೃತ್ವದ ಪೊಲೀಸರು ಉಪ್ಪಳ ಪತ್ವಾಡಿ ರಸ್ತೆಯಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದಾಗ ವಾಹನ ಆಗಮಿಸಿದೆ. ಆದರೆ ದೂರದಿಂದಲೇ ಪೊಲೀಸರನ್ನು ಕಂಡ ಚಾಲಕ ಓಮ್ನಿ ವ್ಯಾನ್ ಉಪೇಕ್ಷಿಸಿ ಓಡಿ ಪರಾರಿ ಯಾಗಿದ್ದಾನೆ. ವ್ಯಾನ್‌ನ್ನು ಪೊಲೀಸರು ಕಸ್ಟಡಿಗೆ ತೆಗೆದು ತಪಾಸಣೆ ನಡೆಸಿದಾಗ ಅದರೊಳಗೆ ೨೫ ಗೋಣಿ ಚೀಲಗಳಲ್ಲಿ ತುಂಬಿಸಿಟ್ಟ ಹೊಯ್ಗೆ ಪತ್ತೆಯಾಗಿದೆ. ಪತ್ವಾಡಿ ಭಾಗದ ಯಾವುದೋ ಹೊಳೆಯಿಂದ ಈ ಹೊಯ್ಗೆಯನ್ನು ಸಂಗ್ರಹಿಸಿ ತಂದಿರಬಹುದೆಂದು ಅಂದಾಜಿಸಲಾಗಿದೆ. ಘಟನೆ ಬಗ್ಗೆ ಪೊಲೀಸರುಕೇಸು ದಾಖಲಿಸಿ ಕೊಂಡು ಪರಾರಿಯಾದ ಓಮ್ನಿ ಚಾಲಕನಿಗಾಗಿ ಶೋಧ ನಡೆಸುತ್ತಿದ್ದಾರೆ. ಇದೇ ರೀತಿ ಶಿರಿಯ ವಳಯಂನಲ್ಲಿ ನಿನ್ನೆ ರಾತ್ರಿ ಹೊಯ್ಗೆ ಸಾಗಿಸುತ್ತಿದ್ದ ಟಿಪ್ಪರ್ ಲಾರಿಯನ್ನು ಕುಂಬಳೆ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಲಾರಿಯ ಚಾಲಕನಾದ ಕುಬಣೂರಿನ ದೀಕ್ಷಿತ್ (೨೭) ಎಂಬಾತನನ್ನು ಬಂಧಿಸಲಾಗಿದೆ.
ಕುಂಬಳೆ ಎಸ್‌ಐ ಟಿ.ಎಂ. ವಿಪಿನ್ ನೇತೃತ್ವದ ಪೊಲೀಸರು ವಳಯಂನಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದಾಗ ಹೊಯ್ಗೆ ಹೇರಿದ ಟಿಪ್ಪರ್ ಲಾರಿ ಆಗಮಿಸಿದೆ ಎನ್ನಲಾಗಿದೆ.