ಹೊಳೆಗಳು ಖಾಲಿ: ಜಲಪ್ರಾಧಿಕಾರದಿಂದ ನೀರು ವಿತರಣೆ ಮೊಟಕು
ಕಾಸರಗೋಡು: ಬೇಸಿಗೆ ಕಾಲದ ಉಷ್ಣತೆ ಮಟ್ಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇದರಿಂದ ಜನರು ಕುಡಿಯುವ ನೀರಿನ ಸಮಸ್ಯೆಯಿಂದ ಸಂಕಷ್ಟಕ್ಕೀಡಾಗುತ್ತಿದ್ದಾರೆ.
ಜಿಲ್ಲೆಯ ಹೊಳೆಗಳಲ್ಲಿ ನೀರು ಪೂರ್ಣವಾಗಿ ಬತ್ತಿಹೋಗಿದ್ದು, ಇದರಿಂದ ಹೊಳೆ ನೀರನ್ನು ಆಶ್ರಯಿ ಸುತ್ತಿರುವವರು ಸಮಸ್ಯೆಗೀಡಾಗಿದ್ದಾರೆ. ಹೊಳೆಗಳಿಂದ ನೀರು ಅಲಭ್ಯವಾ ಗುವುದರೊಂದಿಗೆ ಜಲಪ್ರಾಧಿಕಾ ರದಿಂದ ನೀರು ವಿತರಣೆ ಮೊಟಕು ಗೊಂಡಿದೆ. ಇದರ ಪರಿಣಾಮ ಜಿಲ್ಲೆ ಯಲ್ಲಿ ನಾಲ್ಕು ಪಂಚಾಯತ್ಗಳಲ್ಲಿ ಶುದ್ಧ ನೀರು ಸಮಸ್ಯೆ ತೀವ್ರಗೊಂಡಿದೆ.
ಮಂಜೇಶ್ವರ, ವರ್ಕಾಡಿ, ಕುಂಬಳೆ, ಕಯ್ಯಾರು ಚೀಮೇನಿ ಪಂಚಾಯತ್ ಗಳಲ್ಲಿ ನೀರು ವಿತರಣೆ ಮೊಟಕುಗೊಂ ಡಿದ್ದು, ಇದರಿಂದ ಸುಮಾರು ಎಂಟು ಸಾವಿರ ಕುಟುಂಬಗಳಿಗೆ ನೀರಿನ ಸಮಸ್ಯೆ ಕಾಡುತ್ತಿದೆ. ನೀರು ವಿತರಣೆ ಮೊಟಕು ಗೊಂಡ ಪ್ರದೇಶಗಳ ಸ್ಥಳೀಯಾಡಳಿತ ಸಂಸ್ಥೆಗಳು ಖಾಸಗಿ ಬಾವಿಗಳಿಂದ ನೀರು ಸಂಗ್ರಹಿಸಿ ಖಾಸಗಿ ಏಜೆನ್ಸಿಗಳ ಮೂಲಕ ವಿತರಿಸುತ್ತಿವೆ.
ಉಪ್ಪಳ ಹೊಳೆಯ ಆನೆಕಲ್ಲು, ಕೊಡಂಗೆ, ಶಿರಿಯಾ ಹೊಳೆಯ ಪೂಕಟ್ಟೆ, ಕಾರ್ಯಂಗೋಡು ಹೊಳೆಯ ಕಾಕಡವು ಎಂಬಿಡೆಗಳಲ್ಲಿ ನೀರು ಬತ್ತಿರುವುದೇ ಶುದ್ಧ ನೀರು ವಿತರಣೆ ಮೊಟಕುಗೊಳ್ಳಲು ಕಾರಣವಾಗಿದೆ.
ಈವಾರ ಅಥವಾ ಮುಂದಿನ ವಾರ ಮಳೆ ಸುರಿಯದಿದ್ದರೆ ಉಪ್ಪಳ ಹೊಳೆ ಯಿಂದ ಮಂಗಲ್ಪಾಡಿ ಪಂಚಾಯತ್ಗೆ ಜಲಪ್ರಾಧಿಕಾರದ ಪೈಪ್ ಲೈನ್ ಮೂಲಕ ನೀರು ವಿತರಣೆ ಮೊಟಕು ಗೊಳ್ಳಲಿದೆ. ಮಂಜೇಶ್ವರ ಪಂಚಾಯತ್ ನಲ್ಲಿ ನೂರಷ್ಟು ಮಂದಿಗೆ ಕೊಳವೆ ಬಾವಿಗಳ ನೀರನ್ನು ಜಲಪ್ರಾಧಿಕಾರ ದೊರಕಿಸುತ್ತಿದೆ. ಜಲಪ್ರಾಧಿಕಾರಕ್ಕೆ ಜಿಲ್ಲೆಯಲ್ಲಿ ವಿವಿಧ ಪಂಚಾಯತ್ ಹಾಗೂ ನಗರಸಭೆಗಳಲ್ಲಾಗಿ ೫೬,೫೦೦ ಸಂಪರ್ಕಗಳಿವೆ. ಇದರ ಹೊರತು ೩೧೦೦ ಸಾರ್ವಜನಿಕ ನಳ್ಳಿ ಮೂಲಕ ನೀರು ವಿತರಣೆಯಾಗುತ್ತಿದೆ.