ಹೊಳೆಯಲ್ಲಿ ಮುಳುಗಿ ಯುವಕ ಮೃತ್ಯು

ಮುಳ್ಳೇರಿಯ: ಮೀನು ಹಿಡಿಯಲು ತೆರಳಿದ ವ್ಯಕ್ತಿ ಹೊಳೆನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ನಡೆದಿದೆ.  ಮಂಡೆಕೋಲು ಸಮೀಪ ಪರಪ್ಪೆ ಮೂಲಕ ಹರಿಯುವ ಪಯಸ್ವಿನಿ ಹೊಳೆಯಲ್ಲಿ ನಿನ್ನೆ ಮಧ್ಯಾಹ್ನ ಘಟನೆ ನಡೆದಿದೆ. ಈಶ್ವರ ಮಂಗಲ ಬಳಿಯ ಕನ್ನಟಿಮಾರ್ ಮೇನಾಳ ಎಂಬಲ್ಲಿನ ಪ್ರವೀಣ್ (38) ಎಂಬವರು ಮೃತಪಟ್ಟ ವ್ಯಕ್ತಿಯೆಂದು  ತಿಳಿದುಬಂದಿದೆ.  ಅಡೂರು ಸಮೀಪದ ಸಂಬಂಧಿಕರ ಮನೆಗೆ ತೆರಳಿದ್ದ ಪ್ರವೀಣ್ ಅಲ್ಲಿಂದ ಬೇರೆ ಇಬ್ಬರ ಜೊತೆಗೆ ಮೀನು ಹಿಡಿಯಲೆಂದು ಹೊಳೆಗೆ ತೆರಳಿದಾಗ ಘಟನೆ ನಡೆದಿದೆ. ಘಟನೆ ಬಗ್ಗೆ ಸುಳ್ಯ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

You cannot copy contents of this page