ಹೊಳೆಯಲ್ಲಿ ಸ್ನಾನಕ್ಕಿಳಿದ ಯುವಕ ನೀರಿನಲ್ಲಿ ಮುಳುಗಿ ಸಾವು
ಮುಳ್ಳೇರಿಯ: ಸ್ನಾನಕ್ಕೆಂದು ಹೊಳೆಗಿಳಿದ ಯುವಕ ನೀರಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ನಡೆದಿದೆ.
ಆದೂರು ಮಂಞಪಾರೆಯ ಕುಂಞಮ್ಮದ್-ದೈನಾಬಿ ದಂಪತಿಯ ಪುತ್ರ ಇಲ್ಯಾಸ್ (31) ಸಾವನ್ನಪ್ಪಿದ ಯುವಕ. ಇವರು ನಿನ್ನೆ ಸಂಜೆ ಮಂಞಪಾರೆಯ ಮೇತುಂಗಾಲ್ ಕಡವು ಎಂಬಲ್ಲಿ ಸ್ನಾನಕ್ಕಿಳಿದಿದ್ದರು. ಈ ವೇಳೆ ಅವರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಈ ಬಗ್ಗೆ ನೀಡಿದ ಮಾಹಿತಿಯಂತೆ ಅಗ್ನಿಶಾಮಕ ದಳದ ಅಸಿಸ್ಟೆಂಟ್ ಸ್ಟೇಷನ್ ಆಫೀಸರ್ ಸಂತೋಷ್ ಕುಮಾರ್ ನೇತೃತ್ವದಲ್ಲಿ ಫಯರ್ ಆಂಡ್ ರೆಸ್ಕೂ ಆಫೀಸರ್‌ಗಳಾದ ಉಮ್ಮರ್ ಮಹಮ್ಮದ್, ಶಹದ್ ಮತ್ತು ಸ್ಥಳೀಯ ತಾಜುದ್ದೀನ್ ಎಂಬವರು ಶೋಧ ಕಾರ್ಯಾ ಚರಣೆಯಲ್ಲಿಪತ್ತೆಹಚ್ಚಿ ಮೇಲಕ್ಕೆತ್ತಿದರು. ಈ ವೇಳೆ ಇಲ್ಯಾಸ್ ಮೃತಪಟ್ಟಿದ್ದರು. ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ಸಾಗಿಸಿ ಇಂದು ಬೆಳಿಗ್ಗೆ ಮರಣೋತ್ತರ ಪರೀಕ್ಷೆ ಗೊಳಪಡಿಸಲಾಯಿತು.
ಮೃತರು ಸಹೋದರ-ಸಹೋದರಿಯರಾದ ನಾಸರ್, ರಸಾಕ್, ಲತೀಫ್ ಸಖಾಫಿ, ಸಾಜಿದ್ ಸಖಾಫಿ, ಫೌಸಿಯ, ನೂರ್‌ಜಾಬಿ, ಖೈರುನ್ನಿಸ, ಮಿಸ್ರಿಯ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಆದೂರು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸಿದರು.