ಹೊಸಂಗಡಿಯಲ್ಲಿ ಸರ್ವೀಸ್ ರಸ್ತೆ ಕುಸಿತ ವಾಹನ ಸಂಚಾರ ಅಪಾಯ ಭೀತಿಯಲ್ಲಿ
ಮಂಜೇಶ್ವರ: ಸರ್ವೀಸ್ ರಸ್ತೆ ದಿಢೀರ್ ಆಗಿ ಕುಸಿದು ಹೊಸಂಗಡಿ ಯಲ್ಲಿ ಸಂಚಾರಕ್ಕೆ ಸಂಚಾಕಾರ ಉಂಟಾದ ಘಟನೆ ನಡೆದಿದೆ. ತಲಪಾಡಿ ಭಾಗದಿಂದ ಕಾಸರಗೋಡಿ ನತ್ತ ಸಾಗುವ ಸರ್ವೀಸ್ ರಸ್ತೆಯಲ್ಲಿ ಹೊಸಂಗಡಿಯ ಸಂಕದ ಸಮೀಪ ರಸ್ತೆ ಕುಸಿದು ಬಿರುಕು ಬಿಟ್ಟಿದೆ. ಮೊನ್ನೆ ರಾತ್ರಿ ರಸ್ತೆ ಕುಸಿದಿರುವುದಾಗಿ ಸ್ಥಳೀಯರು ತಿಳಿಸಿದ್ದು, ಈಗಲೂ ಇದೇ ದಾರಿ ಯಾಗಿ ವಾಹನಗಳು ಸಂಚರಿಸುತ್ತಿರು ವುದು ಅಪಾಯಕ್ಕೆ ಆಹ್ವಾನ ನೀಡಿದಂತಾಗಿದೆ. ಕಾಮಗಾರಿ ಪೂರ್ತಿಗೊಳಿಸಿ ಸರ್ವೀಸ್ ರಸ್ತೆಯನ್ನು ಸಂಚಾರಕ್ಕೆ ಬಿಟ್ಟುಕೊಡಲಾಗಿದ್ದರೂ ಆರಂಭದ ಮಳೆಯಲ್ಲೇ ರಸ್ತೆ ಕುಸಿದಿರುವುದು ಕಳಪೆ ಕಾಮಗಾರಿಯಿಂದಾಗಿ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ರಸ್ತೆ ಸರಿಪಡಿಸದೆ ಇದ್ದಲ್ಲಿ ಸಮೀಪದ ತಡೆಗೋಡೆ ಕೂಡಾ ಕುಸಿದು ಬೀಳುವ ಸಾಧ್ಯತೆ ಇದ್ದು, ಇದು ದುರಂತಕ್ಕೆ ಆಹ್ವಾನ ನೀಡಿದಂತಾಗಲಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.