ಹೊಸ ಅನುಭವ ನೀಡಿದ ವಿದ್ಯಾರ್ಥಿಗಳ ಶಿಶು ದಿನ ರ‍್ಯಾಲಿ
ಕಾಸರಗೋಡು: ನೆಹರೂರವರ ನೆನಪಲ್ಲಿ ಸಾವಿರಾರು ಮಕ್ಕಳು ವಿವಿಧ ವೇಷಗಳಲ್ಲಿ ಶಿಶು ದಿನ ರ‍್ಯಾಲಿಯಲ್ಲಿ ಭಾಗವಹಿಸಿದಾಗ ವಿದ್ಯಾನಗರಕ್ಕೆ ಅದು ಹೊಸ ಅನುಭವವನ್ನು ನೀಡಿತು. ಸ್ಟೂಡೆಂಟ್ಸ್ ಪೊಲೀಸ್, ಸ್ಕೌಟ್ ಆಂಡ್ ಗೈಡ್ಸ್, ರೆಡ್‌ಕ್ರಾಸ್, ಹುಲಿವೇಷ, ಬ್ಯಾಂಡ್ ಮೇಳ, ಮಕ್ಕಳ ಸಿಂಗಾರಿ ಮೇಳ, ಕರಾಟೆ ಹೀಗೆ ವಿವಿಧ ವಲಯಗಳ ಮಕ್ಕಳು ಒಂದಾದ ಶಿಶುದಿನ ರ‍್ಯಾಲಿಯನ್ನು ಶಾಸಕ ಎನ್.ಎ. ನೆಲ್ಲಿಕುನ್ನು ಉದ್ಘಾಟಿಸಿದರು. ಬಳಿಕ ಮೈದಾನದಲ್ಲಿ ನಡೆದ ಸ್ಟೂಡೆಂಟ್ ಪಾರ್ಲಿಮೆಂಟ್‌ನಲ್ಲಿ ಮಕ್ಕಳ ಪ್ರಧಾನಮಂತ್ರಿಯಾಗಿ ಆಯ್ಕೆಯಾದ ವೇಲೇಶ್ವರಂ ಶಾಲೆಯ ಶಿವದ ಕುಮಾ ರ್ ಉದ್ಘಾಟಿಸಿದರು. ಮಕ್ಕಳ ಅಧ್ಯಕ್ಷ ಆದಿಮಬಾಬು ಅಧ್ಯಕ್ಷತೆ ವಹಿಸಿದರು. ಜಿಲ್ಲಾಧಿಕಾರಿ ಇಂಭಶೇಖರ್ ಶಿಶುದಿನ ಸಂದೇಶ ನೀಡಿದರು. ಪ್ರಮಾಣಪತ್ರಗಳನ್ನು ವಿತರಿಸಲಾಯಿತು. ಕುಮಾರಿ ಅಕ್ಷರಾತ್ಮಿಕ ಪ್ರಧಾನ ಭಾಷಣ ಮಾಡಿದರು. ಆರ್ಯ ಪಿ. ರಾಜ್ ಶಿಶು ದಿನ ಸ್ಟಾಂಪ್ ಬಿಡುಗಡೆಗೊಳಿಸಿದರು. ಹಲವರು ಭಾಗವಹಿಸಿದರು. ಶಿವಾನಂದ ಎ.ಕೆ. ಸ್ವಾಗತಿಸಿ, ಶ್ರೇಯಾ ಬಿ ವಂದಿಸಿದರು.