ಹೊಸ ಬಸ್ ನಿಲ್ದಾಣದ ಕಾಂಪ್ಲೆಕ್ಸ್ ಬಳಿ ಇರುವ ಅಪಾಯಕಾರಿ ಫ್ಲೆಕ್ಸ್‌ಬೋರ್ಡ್ ತೆರವುಗೊಳಿಸಲು ಬಿಎಂಎಸ್ ಆಗ್ರಹ
ಕಾಸರಗೋಡು: ನಗರದ ಹೊಸ ಬಸ್ ನಿಲ್ದಾಣದಲ್ಲಿರುವ ಕಾಂಪ್ಲೆಕ್ಸ್‌ನ ಪೂರ್ವ ಭಾಗದಲ್ಲಿ ಸ್ಥಾಪಿಸಿರುವ ಫ್ಲೆಕ್ಸ್ ಬೋರ್ಡ್‌ಗಳು ಆಟೋ ಕಾರ್ಮಿ ಕರಿಗೂ, ಸಾರ್ವಜನಿಕರಿಗೂ ಬೆದರಿಕೆ ಸೃಷ್ಟಿಸುವ ರೀತಿಯಲ್ಲಿ ಇದೆ ಎಂದು ಬಿಎಂಎಸ್ ಕಾಸರಗೋಡು ವಲಯ ಸಮಿತಿ ಆರೋಪಿಸಿದೆ. ಇತ್ತೀಚೆಗೆ ಬಸ್‌ಸ್ಟಾಂಡ್ ಕಾಂಪ್ಸೆಕ್ಸ್‌ನ ಮೇಲ್ಭಾಗ ದಲ್ಲಿದ್ದ ಫ್ಲೆಕ್ಸ್ ಬೋರ್ಡ್ ಮುರಿದು ಬಿದ್ದು ಹಲವಾರು ವಾಹನಗಳಿಗೆ ಹಾನಿ ಯಾಗಿತ್ತು. ಅಂದು ಅದೃಷ್ಟವಶಾತ್ ಆಟೋ ಕಾರ್ಮಿಕರು ಹಾಗೂ ಸಾರ್ವ ಜನಿಕರು ಅಪಾಯದಿಂದ ಪಾರಾಗಿದ್ದಾರೆ. ಇದೇ ರೀತಿಯ ದುರಂತಗಳು ಸಂಭವಿ ಸದಿರಲು ಈ ರೀತಿಯ ಫ್ಲೆಕ್ಸ್ ಬೋರ್ಡ್‌ಗಳನ್ನು ತೆರವುಗೊಳಿಸಲಿರುವ ಕ್ರಮ ನಗರಸಭೆ ಕೈಗೊಳ್ಳಬೇಕೆಂದು ಭಾರತೀಯ ಮಜ್ದೂರ್ ಸಂಘ ಕಾಸರ ಗೋಡು ವಲಯ ಸಮಿತಿ ಆಗ್ರಹಿಸಿದೆ.