ಹೊಸ ವರ್ಷದ ಅಂಗವಾಗಿ ಮಾದಕ ವಸ್ತುಗಳ ತಪಾಸಣೆ ಬಿಗು: ಜಿಲ್ಲಾ ಮಟ್ಟದ ಜನಪರ ಸಮಿತಿ ಸಭೆ

ಕಾಸರಗೋಡು: ಹೊಸ ವರ್ಷದ ಅಂಗವಾಗಿ ನಕಲಿ ಮಧ್ಯ ಉತ್ಪಾದನೆ, ವಿತರಣೆ, ಮಾದಕ ವಸ್ತುಗಳ ಕಳ್ಳ ಸಾಗಣಿಕೆ, ಮಾದಕ ವಸ್ತುಗಳ ಉಪಯೋಗ ಹಾಗೂ ವಿತರಣೆ, ಅಕ್ರಮ ಮಧ್ಯ ಸಾಗಾಟ ಎಂಬಿವು ಗಳನ್ನು ತಡೆಯಲು ಅಬಕಾರಿ ಇಲಾ ಖೆಯು ತಪಾಸಣೆ ಬಿಗಿಗೊಳಿಸಿದೆ. ಈ ಕುರಿತು ಚರ್ಚಿಸಲು ಜಿಲ್ಲಾ ಮಟ್ಟದ ಜನ ಪರ ಕಮಿಟಿ ಸಭೆ ಎಡಿಎಂ ಕೆ.ನವೀನ್ ಬಾಬು ಅವರ ಅಧ್ಯಕ್ಷತೆಯಲ್ಲಿ ಜರಗಿತು. ಜಿಲ್ಲೆಯ ಎಕ್ಸೈಸ್ ಇಲಾಖೆಯ ಡೆಪ್ಯೂಟಿ ಎಕ್ಸೈಸ್ ಕಮಿಷನರ್ ಪಿ.ಕೆ.ಜಯರಾಜ್ ರಿಪೋರ್ಟ್ ಮಂಡಿಸಿದರು. ಕ್ರಿಸ್ಮಸ್ ಹಾಗೂ ಹೊಸ ವರ್ಷದ ಆಚರಣೆ ಸಮಯವನ್ನು ಸ್ಪೆಷಲ್ ಎನ್ಫೋ ರ್ಸ್ಮೆಂಟ್ ಸಮಯ ಘೋಷಿಸಿ ಎಕ್ಸೈಸ್ ಇಲಾಖೆಯು ವಿವಿಧ ಚಟುವಟಿಕೆ ಗಳನ್ನು ನಡೆಸುತ್ತಿದೆ. ಕಾಸರಗೋಡು ಡಿವಿಷನ್ ಆಫೀಸ್ ನಲ್ಲಿ 24 ಗಂಟೆಯೂ ಕಾರ್ಯ ನಿರ್ವಹಿಸುವ ಕಂಟ್ರೋಲ್ ರೂಂಅನ್ನು ತೆರೆಯ ಲಾಗಿದೆ. ಕಾಸರಗೋಡು, ಹೊಸ ದುರ್ಗ ಎಕ್ಸೈಸ್ ಸರ್ಕಲ್ ಆಫೀಸ್ ನಲ್ಲಿ 24 ಗಂಟೆಯೂ ಕಾರ್ಯನಿರ್ವ ಹಿಸುವ ಎರಡು ಸ್ಟ್ರಕಿಂಗ್ ಫೋರ್ಸ್ ಗಳು ರೂಪಿಕರಿಸಲಾಗಿದೆ. ಜಿಲ್ಲೆಯ ಗಡಿ ಪ್ರದೇಶದಲ್ಲಿ ವಿಶೇಷ ಪಟ್ರೋಲಿಂಗ್‌ಗಾಗಿ ಬಾರ್ಡರ್ ಪಟ್ರೋಲ್ ಯೂನಿಟ್ ಮತ್ತು ಕೆಮು (ಕೇರಳ ಎಕ್ಸೈಸ್ ಮೊಬೈಲ್ ಇಂಟರ್ವೇಷನ್ ಯೂನಿಟ್) ಸಹ ಸಕ್ರಿಯವಾಗಿದೆ. ಮಾದಕ ವಸ್ತುಗಳ ದಂಧೆಯಲ್ಲಿ ತೊಡಗಿರುವ ಜಿಲ್ಲೆಯ ಅಪರಾಪಿsಗಳ ಮಾಹಿತಿಯನ್ನು ಸಂಗ್ರಹಿಸಿ ನಿಗಾ ವಹಿಸುತ್ತಿದೆ. ಮದ್ಯ, ಮಾದಕ ವಸ್ತುಗಳ ಕಳ್ಳ ಸಾಗಾಟ ತಡೆಯಲು ಜಿಲ್ಲೆಯಾದ್ಯಂತ ವಾಹನ ತಪಾಸಣೆ ಬಿಗಿಗೊಳಿಸಲಾಗಿದೆ ಎಂದು ಡೆಪ್ಯುಟಿ ಎಕ್ಸೈಸ್ ಕಮಿಷನರ್ ಪಿ.ಕೆ.ಜಯರಾಜ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page