೪೩.೩೮ ಲೀಟರ್ ಕರ್ನಾಟಕ ಮದ್ಯ ವಶ: ಓರ್ವ ಸೆರೆ

ಕಾಸರಗೋಡು: ನಗರದ ನುಳ್ಳಿಪ್ಪಾಡಿಯಲ್ಲಿ ಅಬಕಾರಿ ತಂಡ ನಿನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ ಕರ್ನಾಟಕ ನಿರ್ಮಿತ ೪೩.೩೮ ಲೀಟರ್ (೧೮೦ ಎಂಎಲ್‌ನ ೨೪೧ ಬಾಟಲಿ) ಮದ್ಯ ವಶಪಡಿಸಲಾಗಿದೆ. ಈ ಸಂಬಂಧ ನುಳ್ಳಿಪ್ಪಾಡಿಯ ಬಾಬು ಪೂಜಾರಿ (೫೮) ಎಂಬಾತನನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ. ಬಂಧಿತನನ್ನು ಬಳಿಕ ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ. ಕಾಸರಗೋಡು ಎಕ್ಸೈಸ್ ರೇಂಜ್ ಕಚೇರಿಯ ಎಕ್ಸೈಸ್ ಇನ್ಸ್‌ಪೆಕ್ಟರ್ ಶಿಜು ಇ.ಟಿ.ಯವರ ನೇತೃತ್ವದಲ್ಲಿ ಸಿಇಒಗಳಾದ ರಾಜೇಶ್ ಪಿ, ಮುರಳೀಧರನ್ ಮತ್ತು ಪ್ರಸೀಲಾ ಎಂಬವರನ್ನೊಳಗೊಂಡ ತಂಡ ಈ ಅಬಕಾರಿ ಕಾರ್ಯಾಚರಣೆ ನಡೆಸಿ ಮಾಲು ಸಹಿತ ಆರೋಪಿಯನ್ನು ಬಂಧಿಸಿದೆ.

Leave a Reply

Your email address will not be published. Required fields are marked *

You cannot copy content of this page