೭.೨ ಲೀಟರ್ ಮದ್ಯ ವಶ : ಸ್ಕೂಟರ್ ಸಹಿತ ಓರ್ವ ಸೆರೆ
ಬದಿಯಡ್ಕ: ಬದಿಯಡ್ಕಕ್ಕೆ ಸಮೀಪದ ದೇವರಡ್ಕದಲ್ಲಿ ಕರ್ನಾಟಕ ಗಡಿ ಪ್ರದೇಶ ಬಳಿ ಬದಿಯಡ್ಕ ಅಬಕಾರಿ ರೇಂಜ್‌ನ ಅಬಕಾರಿ ಇನ್ಸ್‌ಪೆಕ್ಟರ್ ಮಿನು ಎಚ್. ರ ನೇತೃತ್ವದಲ್ಲಿ ನಿನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ ೭.೨ ಲೀಟರ್ ಕರ್ನಾಟಕ ನಿರ್ಮಿತ ಮದ್ಯ ಪತ್ತೆಹಚ್ಚಿ ವಶಪಡಿಸಲಾಗಿದೆ.
ಇದಕ್ಕೆ ಸಂಬಂಧಿಸಿ ಅಜ್ಜಾವರ ಗಂಧದಗುಡ್ಡೆ ನಿವಾಸಿ ನಾಗರಾಜ ಕೆ. ಎಂಬಾತನನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ. ಈತ ಚಲಾಯಿಸುತ್ತಿದ್ದ ಸ್ಕೂಟರನ್ನು ಅಬಕಾರಿ ತಂಡ ವಶಕ್ಕೆ ತೆಗೆದುಕೊಂಡಿದೆ. ಅಬಕಾರಿ ಕಾರ್ಯಾಚರಣೆ ನಡೆಸಿದ ತಂಡದಲ್ಲಿ ಸಿಇಒಗಳಾದ ಮನೋಜ್ ಪಿ, ಸೋನ್‌ಸನ್ ಪೋಲ್, ಮೋಹನ್ ಕುಮಾರ್ ಎನ್, ಜನಾರ್ದನ್, ಪ್ರಭಾಕರನ್, ಜೋಬಿ ಮತ್ತು ಚಾಲಕ ರಾಧಾಕೃಷ್ಣನ್ ಎಂಬವರು ಒಳಗೊಂಡಿದ್ದರು.