೮.೪೫ ಲೀಟರ್ ಬಿಯರ್ ವಶ: ಕೇಸು ದಾಖಲು
ಕುಂಬಳೆ: ಕುಂಬಳೆ ಕೊಪಾಡಿ ಕಂಚಿಕಟ್ಟೆಯಲ್ಲಿ ಕುಂಬಳೆ ಅಬಕಾರಿ ರೇಂಜ್‌ನ ಅಸಿಸ್ಟೆಂಟ್ ಎಕ್ಸೈಸ್ ಇನ್ಸ್‌ಪೆಕ್ಟರ್ (ಗ್ರೇಡ್) ಸುರೇಶ್ ಬಾಬು ಕೆ.ರ ನೇತೃತ್ವದ ತಂಡ ನಿನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ ೮.೪೫ ಲೀಟರ್ ಕೇರಳ ಬಿಯರ್ ಪತ್ತೆಹಚ್ಚಿ ವಶಪಡಿಸಿಕೊಂಡಿದೆ. ಇದಕ್ಕೆ ಸಂಬಂಧಿಸಿ ಕೊಪಾಡಿ ಕಂಚಿಕಟ್ಟೆಯ ರಾಜೇಶ್ ಕೆ. ಎಂ ಬಾತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಈ ಕಾರ್ಯಾ ಚರಣೆ ನಡೆಸಿದ ಅಬಕಾರಿ ತಂಡದಲ್ಲಿ ಪ್ರಿವೆಂಟಿವ್ ಆಫೀಸರ್ ಸಂಜೀವ್, ವಿ.ಸಿ, ಸಿವಿಲ್ ಎಕ್ಸೈಸ್ ಆಫೀಸರ್‌ಗಳಾದ ರಂಜಿತ್ ಟಿ.ಕೆ, ಅಖಿಲೇಶ್ ಎಂ.ವಿ, ಮತ್ತು ಲಿಮ ಎಂಬವರು ಒಳಗೊಂಡಿದ್ದಾರೆ.