1.600 ಕಿಲೋ ಗಾಂಜಾ ಪತ್ತೆ: ಓರ್ವ ಸೆರೆ : ಸ್ಕೂಟರ್ ವಶ
ಕಾಸರಗೋಡು: ನಗರದ ಪ್ರೆಸ್ ಕ್ಲಬ್ ಜಂಕ್ಷನ್‌ನಲ್ಲಿ ಕಾಸರಗೋಡು ಪೊಲೀಸರು ನಿನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ 1.600 ಕಿಲೋ ಗಾಂಜಾ ಪತ್ತೆಹಚ್ಚಿ ವಶಪ ಡಿಸಿ ಕೊಂಡಿದ್ದಾರೆ. ಇದಕ್ಕೆ ಸಂಬಂ ಧಿಸಿ ಉಳಿಯತ್ತಡ್ಕ ಶಿರಿಬಾಗಿಲು ತಾಯ ಲ್‌ವಳಪ್ಪ್ ಹೌಸ್‌ನ ಮೊಹಮ್ಮದ್ ಅರ್ಶಾದ್ (25) ಎಂಬಾತನನ್ನು ಬಂಧಿಸಿ ಎನ್‌ಡಿಪಿ ಎಸ್ ಪ್ರಕರಣ ದಾಖಲಿಸಲಾಗಿದೆ. ಆರೋಪಿ ಸಂಚರಿಸುತ್ತಿದ್ದ ಸ್ಕೂಟರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಕಾಸರಗೋಡು ಪೊಲೀಸ್ ಠಾಣೆ ಎಸ್‌ಐ ಅಖಿಲ್ ಪಿ.ಟಿ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ. ಬಂಧಿತನ ಕೈಯಲ್ಲಿದ್ದ ಮೊಬೈಲ್ ಫೋನ್‌ನ್ನು ಪೊಲೀಸರು ವಶಪಡಿಸಿ ಕೊಂಡು ಅದರಲ್ಲಿರುವ ಮಾಹಿತಿಗ ಳನ್ನು ಸಂಗ್ರಹಿಸತೊಡಗಿದ್ದಾರೆ.