10 ಗ್ರಾಂಗೆ 76 ಸಾವಿರ ರೂ. ದಾಟಿ ದಾಖಲೆ ಬರೆದ ಬಂಗಾರ
ತಿರುವನಂತಪುರ: ಭಾರತದಲ್ಲಿ ಚಿನ್ನದ ಬೆಲೆಯು ಮೊದಲ ಬಾರಿಗೆ 10 ಗ್ರಾಂಗೆ 76 ಸಾವಿರ ರೂಪಾಯಿಯ ಮಹತ್ವದ ಮೈಲುಗಲ್ಲನ್ನು ದಾಟಿದೆ. ಬೆಳ್ಳಿ ದರ ಕೂಡಾ ಏರಿಕೆ ಹಾದಿಯಲ್ಲಿದ್ದು, ಇವುಗಳ ದರಗಳು ಗಗನಮುಖಿಯಾಗಿ ಹೊಸ ದಾಖಲೆ ಬರೆಯುವತ್ತ ಸಾಗಿದೆ. ಜಾಗತಿಕ ಆರ್ಥಿಕ ವಿಚಾರಗಳು ಅಮೆರಿಕಾದ ಫೆಡರಲ್ ರಿಸರ್ವ್ ಬಡ್ಡಿದರ ಕಡಿತ ಮತ್ತು ಹೆಚ್ಚುತ್ತಿರುವ ಭೌಗೋಳಿಕ ರಾಜಕೀಯ ಉದ್ವಿಗ್ನ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಹೂಡಿಕೆದಾರರು ಚಿನ್ನವನ್ನು ಸುರಕ್ಷಿತ ಹೂಡಿಕೆ ಸಾಧನವಾಗಿ ಪರಿಗಣಿ ಸುತ್ತಿರುವುದೇ ಚಿನ್ನದ ಬೆಲೆಯೆರಿಕೆಗೆ ಪ್ರಧಾನ ಕಾರಣವಾಗಿದೆಯೆಂದು ಹೇಳ ಲಾಗುತ್ತಿದೆ. ಜಾಗತಿಕವಾಗಿ ಸ್ಪೋಟ್ ಚಿನ್ನದ ಬೆಲೆ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ತಲುಪಿದೆ. ಈ ವರ್ಷ ಚಿನ್ನದ ಬೆಲೆಯಲ್ಲಿ ಶೇ. ೨೦ರಷ್ಟು ಏರಿಕೆಯಾಗಿದೆ. ಇದು ಗಗನಮುಖಿ ಯಾಗಿ ಇನ್ನೂ ಮೇಲಕ್ಕೇರುವ ಸಾಧ್ಯತೆಯಿದೆಯೆಂದು ತಜ್ಞರು ಹೇಳುತ್ತಿದ್ದಾರೆ.
ಗ್ರಾಂ ಒಂದರ ಚಿನ್ನದ ಬೆಲೆಯಲ್ಲಿ 60 ರೂ.ಗಳ ಏರಿಕೆ ಉಂಟಾಗಿದ್ದು, ಇದರಿಂದಾಗಿ ಪವನ್ ಒಂದರ ಚಿನ್ನದ ಬೆಲೆ 56.480ರೂ.ಗೇರಿದೆ.