1056 ಪ್ಯಾಕೆಟ್ ಕರ್ನಾಟಕ ಮದ್ಯ ಪತ್ತೆ: ಕಾರು ವಶ
ಕಾಸರಗೋಡು: ಮಧೂರು ಪಟ್ಲದಲ್ಲಿ ಅಬಕಾರಿ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ ಅಲ್ಟೋ ಕಾರಿನಲ್ಲಿ ಸಾಗಿಸುತ್ತಿದ್ದ 180 ಎಂ.ಎಲ್.ನ 1056 ಪ್ಯಾಕೆಟ್ (190.8 ಲೀಟರ್) ಕರ್ನಾಟಕ ನಿರ್ಮಿತ ಮದ್ಯ ಪತ್ತೆಹಚ್ಚಿ ವಶಪಡಿಸಲಾಗಿದೆ. ಮಾಲು ಸಾಗಿಸಲು ಬಳಸಲಾದ ಕಾರನ್ನು ಅಬಕಾರಿ ತಂಡ ವಶಪಡಿಸಿದೆ.ಆದರೆ ಮಾಲನ್ನು ಸಾಗಿಸುತ್ತಿದ್ದ ವ್ಯಕ್ತಿ ತಕ್ಷಣ ಪರಾರಿಯಾಗಿದ್ದಾನೆ. ಕಾಸರಗೋಡು ಎಕ್ಸೈಸ್ ಸ್ಪೆಷಲ್ ಸ್ಕ್ವಾಡ್ನ ಅಸಿಸ್ಟೆಂಟ್ ಎಕ್ಸೈಸ್ ಇನ್ಸ್ಪೆಕ್ಟರ್ ಸಿ. ಕೆ. ವಿ. ಸುರೇಶ್ರ ನೇತೃತ್ವದಲ್ಲಿ ಮೊನ್ನೆ ಸಂಜೆ ಕಾರ್ಯಾಚರಣೆ ನಡೆದಿದೆ.
ಈ ಅಬಕಾರಿ ತಂಡದಲ್ಲಿ ಪ್ರಿವೆಂಟೀವ್ ಆಫೀಸರ್ (ಗ್ರೇಡ್)ಗಳಾದ ನೌಶಾದ್ ಕೆ., ಅಜೀಶ್ ಸಿ., ಸಿವಿಲ್ ಎಕ್ಸೈಸ್ ಆಫೀಸರ್ಗಳಾದ ಮಂಜುನಾಥನ್ ವಿ., ಧನ್ಯಾ ಟಿ.ವಿ. ಎಂಬವರು ಒಳಗೊಂಡಿದ್ದರು. ಉಳಿಯತ್ತಡ್ಕದಲ್ಲಿ ಆ ದಾರಿಯಾಗಿ ಬಂದ ಕಾರನ್ನು ನಿಲ್ಲಿಸುವಂತೆ ಸೂಚಿಸಿದರೂ, ಮುಂದಕ್ಕೆ ಸಾಗಿದೆ. ಶಂಕೆಗೊಂಡ ಅಬಕಾರಿ ತಂಡ ಕಾರನ್ನು ಹಿಂಬಾಲಿಸಿ ಪಟ್ಲದಲ್ಲಿ ಸಾಹಸಿಕವಾಗಿ ತಡೆದು ತಪಾಸಣೆಗೊಳಪಡಿಸಿ ದಾಗ ಅದರಲ್ಲಿ ಮದ್ಯ ಪತ್ತೆಯಾಗಿದೆ. ಮದ್ಯ ಸಾಗಿಸಿದ ವ್ಯಕ್ತಿಯ ಬಗ್ಗೆ ಸ್ಪಷ್ಟ ಮಾಹಿತಿ ಲಭಿಸಿದೆ ಎಂದು ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ.