111ನೇ ವರ್ಷದಲ್ಲಿ ಜಿಲ್ಲೆಯ ಹಿರಿಯ ಮತದಾರೆ ನಿಧನ

ಹೊಸದುರ್ಗ: ಇಲ್ಲಿಗೆ ಸಮೀಪದ ವೆಳ್ಳಿಕೋತ್ ಅಡೋಟ್ಟೆ ಪುಳೋತ್ ವಳಪ್ಪ್ ಚಾಪಯಿಲ್ ವೀಟಿಲ್ ನಿವಾಸಿ ಸಿ. ಕುಪ್ಪಚ್ಚಿ ಅಮ್ಮ (111) ನಿಧನ ಹೊಂದಿ ದರು. ಜಿಲ್ಲೆಯ ಅತ್ಯಂತ ಹೆಚ್ಚು ಪ್ರಾಯದ ಮತದಾರರಾಗಿದ್ದರು. ವೆಳ್ಳಿಕೋತ್ ಮಹಾಕವಿ ಪಿ. ಸ್ಮಾರಕ ಶಾಲೆಯ ೨೦ನೇ ನಂಬ್ರ ಬೂತ್ ನಲ್ಲಿ ಕೊನೆಯದಾಗಿ ಇವರು ಮತದಾನ ಮಾಡಿದ್ದರು.

ಕಳೆದ ಲೋಕಸಭಾ ಚುನಾವಣೆ ಯಲ್ಲಿ ಪ್ರಾಯ ಹೆಚ್ಚಿರುವವರಿಗೆ ಮನೆಯಲ್ಲೇ ಮತದಾನ ಮಾಡು ವಂತಹ ಯೋಜನೆಯ ಜಿಲ್ಲಾ ಮಟ್ಟದ ಉದ್ಘಾಟನೆ ಇವರ ಮನೆ ಯಲ್ಲಿ ಜಿಲ್ಲಾಧಿಕಾರಿ ಕೆ. ಇಂಬ ಶೇಖರ್ ನಿರ್ವಹಿಸಿ ಕುಪ್ಪಚ್ಚಿಯ ವರನ್ನು ಗೌರವಿಸಿದ್ದರು. 1948ರ ಭತ್ತ ಕೊಯ್ಲು ಮುಷ್ಕರದಲ್ಲಿ ಭಾಗವಹಿಸಿದ್ದರು. ಇವರ ಪತಿ ಕೃಷ್ಣನ್ ಈ ಹಿಂದೆ ನಿಧನ ಹೊಂದಿದ್ದಾರೆ. ಮೃತರು ಸೊಸೆ ಕೆ.ವಿ. ರಾಧ, ಸಹೋದರಿಯರಾದ ಚಿರುದ ಕುಂಞಿ, ಕುಂಞಿಪೆಣ್ಣ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಪುತ್ರ ಕುಟ್ಯನ್ ಹಾಗೂ ಇಬ್ಬರು ಸಹೋದರಿಯರು, ಇಬ್ಬರು ಸಹೋದರರು ಈ ಹಿಂದೆ ನಿಧನ ಹೊಂದಿದ್ದಾರೆ.

RELATED NEWS

You cannot copy contents of this page