12ನೇ ವೇತನ ಪರಿಷ್ಕರಣೆ ಕೂಡಲೇ ಜ್ಯಾರಿಗೊಳಿಸಬೇಕೆಂದು ಆಗ್ರಹಿಸಿ ಎನ್‌ಜಿಒ ಸಂಘ್ ಉಪವಾಸ ಮುಷ್ಕರ
ಕಾಸರಗೋಡು: 12ನೇ ವೇತನ ಪರಿಷ್ಕರಣೆ ಕೂಡಲೇ ಜ್ಯಾರಿ ಗೊಳಿಸಬೇಕೆಂದು ಆಗ್ರಹಿಸಿ ಕೇರಳ ಎನ್‌ಜಿಒ ಸಂಘ್ ಜಿಲ್ಲಾ ಸಮಿತಿಯ ಆಶ್ರಯದಲ್ಲಿ ಕಾಸರಗೋಡು ಸಿವಿಲ್ ಸ್ಟೇಷನ್‌ನಲ್ಲಿ ಉಪವಾಸ ಮುಷ್ಕರ ನಡೆಸಲಾಯಿತು. 2024 ಜುಲೈ 1ರಿಂದ ನೌಕರರಿಗೆ ಲಭಿಸಬೇಕಾಗಿದ್ದ ವೇತನ ಪರಿಷ್ಕರಣೆ ಮೊಟಕುಗೊಂಡು ಒಂದು ವರ್ಷ ಪೂರ್ತಿಯಾಗುವ ನಿನ್ನೆ ನಡೆಸಿದ ಉಪವಾಸ ಮುಷ್ಕರವನ್ನು ಎನ್‌ಜಿಒ ಸಂಘ್ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಪಿ.ಪೀತಾಂಭರನ್ ಉದ್ಘಾಟಿಸಿ ದರು. ಜಿಲ್ಲಾಧ್ಯಕ್ಷ ಕೆ. ರಂಜಿತ್ ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಕಾರ್ಯದರ್ಶಿ ಸುನಿಲ್ ಪಿ.ಸಿ. ಪುಳುವಿಂಜಿ ಸ್ವಾಗತಿಸಿ, ರಾಜೇಶ್ ನೆಕ್ರಾಜೆ ವಂದಿಸಿದರು. ರವಿಕುಮಾರ್ ಕೆ, ರವೀಂದ್ರನ್, ರಘುನಾಥನ್, ಸಂತೋಷ್, ಟಿ. ತುಳಸೀಧರನ್, ಟಿ. ರಂಜೀವ್ ರಾಘವನ್ ಮಾತನಾಡಿದರು.