17ರ ಹರೆಯದ ಬಾಲಕಿಗೆ ಕಿರುಕುಳ : ಯುವಕನ ವಿರುದ್ಧ ಪೋಕ್ಸೋ ಕೇಸು
ಕುಂಬಳೆ: 17ರ ಹರೆಯದ ಬಾಲಕಿಗೆ ಕಿರುಕುಳ ನೀಡಿದ ಆರೋಪದಂತೆ ಯುವಕನ ವಿರುದ್ಧ ಕುಂಬಳೆ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಬದಿಯಡ್ಕ ಠಾಣೆ ವ್ಯಾಪ್ತಿಯಲ್ಲಿ ವಾಸಿಸುವ ಬಾಲಕಿಗೆ ಕಿರುಕುಳ ನೀಡಿರುವುದಾಗಿ ದೂರಲಾಗಿದೆ. ಬಾಲಕಿ ನಿರಂತರ ಶಾಲೆಗೆ ಹಾಜರಾಗದ ಹಿನ್ನೆಲೆಯಲ್ಲಿ ಅಧ್ಯಾಪಿಕೆಯರು ವಿಚಾರಿಸಿದಾಗ ಘಟನೆ ಬೆಳಕಿಗೆ ಬಂದಿದೆ. ವಿಷಯವನ್ನು ಶಾಲಾ ಅಧಿಕಾರಿಗಳು ಬದಿಯಡ್ಕ ಪೊಲೀಸರಿಗೆ ತಿಳಿಸಿದ್ದಾರೆ. ಪೊಲೀಸರು ಬಾಲಕಿಯಿಂದ ಹೇಳಿಕೆ ದಾಖಲಿಸಿಕೊಂಡಿದ್ದಾರೆ.
ಘಟನೆ ನಡೆದಿರುವುದು ಕುಂಬಳೆ ಠಾಣೆ ವ್ಯಾಪ್ತಿಯಲ್ಲಾಗಿದೆ. ಈ ಹಿನ್ನೆಲೆಯಲ್ಲಿ ಕುಂಬಳೆ ಪೊಲೀಸರು ಯುವಕನ ವಿರುದ್ಧ ಪೋಕ್ಸೋ ಕೇಸು ದಾಖಲಿಸಿಕೊಂಡಿದ್ದಾರೆ.
ದೈವ ಮಹೋತ್ಸವಕ್ಕೆ ತಲುಪಿದಾಗ ಬಾಲಕಿಯನ್ನು ಯುವಕ ಪರಿಚಯಗೊಂಡಿದ್ದನೆಂದು ಹೇಳಲಾಗುತ್ತಿದೆ.