ಎಂಡೋಸಲ್ಫಾನ್ ಸಂತ್ರಸ್ತರಾದ 35೦ ಮಂದಿಗೆ 17 ಕೋಟಿ 5೦ ಲಕ್ಷ ರೂ. ವಿತರಣೆ- ಜಿಲ್ಲಾಧಿಕಾರಿ

ಕಾಸರಗೋಡು: ಎಂಡೋಸಲ್ಫಾನ್ ಸಂತ್ರಸ್ತರಿಗಿರುವ ಧನಸಹಾಯವಾಗಿ 17 ಕೋಟಿ 5೦ ಲಕ್ಷ ರೂ. ವಿತರಿಸಿರುವುದಾಗಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ. 2017ರಲ್ಲಿ ನಡೆಸಿದ ಎಂಡೋಸಲ್ಫಾನ್ ಸಂತ್ರಸ್ತರಿಗಿರುವ ವೈದ್ಯಕೀಯ ಶಿಬಿರದಲ್ಲಿ ಭಾಗವಹಿಸಿ ಯಾದಿಯಲ್ಲಿ ಒಳಗೊಂಡ 35೦ ಮಂದಿಗೆ ನಷ್ಟ ಪರಿಹಾರ ಮೊತ್ತವಾದ 5 ಲಕ್ಷ ರೂ.ನಂತೆ ಧನಸಹಾಯ ನೀಡಲಾಗಿದೆ. ಇದುವರೆಗೆ 17 ಕೋಟಿ 5೦ ಲಕ್ಷ ರೂ. ವಿತರಿಸಿದ್ದು, ಒಟ್ಟು 977 ಮಂದಿ ಯಾದಿಯಲ್ಲಿ ಒಳಗೊಂಡಿದ್ದಾರೆ.

ಇದರ ಹೊರತಾಗಿ 201 ಅರ್ಜಿಗಳಲ್ಲಿ ಧನ ಸಹಾಯ ಮಂಜೂರು ಮಾಡುವುದಕ್ಕಿರುವ ಕ್ರಮಗಳು ಪ್ರಗತಿಯಲ್ಲಿದೆ. 2017ರ ಶಿಬಿರದಲ್ಲಿ ಭಾಗವಹಿಸಿ ಸಂತ್ರಸ್ತರ ಯಾದಿಯಲ್ಲಿ ಒಳಗೊಂಡ, ಇನ್ನೂ ಕೂಡಾ ಧನಸಹಾಯಕ್ಕೆ ಅರ್ಜಿ ಸಲ್ಲಿಸಲು  432 ಮಂದಿ ಬಾಕಿ ಇದ್ದು, ಇವರಿಗೆ ಧನ ಸಹಾಯ ಮಂಜೂರು ಮಾಡಲಿರುವ ಕ್ರಮ ಮುಂದುವರಿಯುತ್ತಿದೆ. ಜಿಲ್ಲಾಧಿಕಾರಿಯ ಅಧ್ಯಕ್ಷತೆಯಲ್ಲಿ ಅವಲೋಕನ ಸಭೆಗಳನ್ನು ನಡೆಸಿ ಕನಿಷ್ಠ ಕಾಲಾವಧಿಯೊಳಗೆ 350ಅರ್ಜಿದಾರರಿಗೆ ಧನಸಹಾಯ ವಿತರಿಸಲು ಸಾಧ್ಯವಾಗಿದೆ.

2022ರಲ್ಲಿ ಅರ್ಜಿ ಆಹ್ವಾನಿಸಿ ವಿವಿಧ ಹಂತಗಳಲ್ಲಾಗಿ ಶಿಬಿರಗಳನ್ನು ನಡೆಸಲಾಗಿದೆ. ಈ ಹಿನ್ನೆಲೆಯಲ್ಲಿ ಲಭಿಸಿದ ಅರ್ಜಿ ಪ್ರಕಾರ ಸಂತ್ರಸ್ತರ ಯಾದಿ ತಯಾರಿಸಲಾಗುತ್ತಿದೆ. ಧನಸಹಾಯ ಲಭಿಸದವರು ಅಕ್ಷಯ ಸೆಂಟರ್‌ಗಳ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅಗತ್ಯದ ದಾಖಲೆಗಳಾಗಿ ಒಪಿ ನಂಬ್ರ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕದ ಪ್ರತಿ, ರೇಶನ್ ಕಾರ್ಡ್ ಸಲ್ಲಿಸಬೇಕಾಗಿದೆ.

RELATED NEWS

You cannot copy contents of this page