ವಿಧಾನಸಭಾ ಚುನಾವಣೆ: ಮಂಜೇಶ್ವರದಲ್ಲಿ ಅಭ್ಯರ್ಥಿಗಳ ಚಿತ್ರಣ ಸ್ಪಷ್ಟ: ಕಾಸರಗೋಡಿನಲ್ಲಿ ಇನ್ನೂ ಅಸ್ಪಷ್ಟ

ಕಾಸರಗೋಡು:  ಎಪ್ರಿಲ್ 9ರಂದು ನಡೆಯುವ ರಾಜ್ಯ ವಿಧಾನ ಸಭಾ ಚುನಾವಣೆಗೆ ಒಕ್ಕೂಟಗಳು ಹಾಗೂ ಪಕ್ಷಗಳು ಸಿದ್ಧಗೊಂಡಿ ದ್ದರೂ ಜಿಲ್ಲೆಯ ವಿವಿಧ ಮಂಡಲಗಳ ಅಭ್ಯರ್ಥಿ ನಿರ್ಣಯದಲ್ಲಿ ಇನ್ನೂ ಅಸ್ಪಷ್ಟತೆ ಮುಂದುವರಿಯುತ್ತಿದೆ. ಕಾಸರಗೋಡು ಹೊರತುಪಡಿಸಿ ಇತರ ನಾಲ್ಕು ಮಂಡಲಗಳಲ್ಲೂ ಅಭ್ಯರ್ಥಿಗಳನ್ನು ಘೋಷಿಸಿದ ಎಡರಂಗ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿದೆ. ರಾಜ್ಯದ ಗಮನಾರ್ಹ ಮಂಡಲವಾದ ಮಂಜೇಶ್ವರದಲ್ಲಿ ಮೂರು ಒಕ್ಕೂಟಗಳಿಗೂ ಅಭ್ಯರ್ಥಿಗಳ  ನಿರ್ಣಯವಾಗಿದೆ. ಹಾಲಿ ಶಾಸಕ ಮುಸ್ಲಿಂ ಲೀಗ್‌ನ ಎಕೆಎಂ ಅಶ್ರಫ್ ಯುಡಿಎಫ್ ಅಭ್ಯರ್ಥಿಯಾಗಿ ಮತ್ತೊಮ್ಮೆ ಚುನಾವಣಾ ಕಣಕ್ಕಿಳಿಯು ವರೆಂದು ಖಚಿತಗೊಂಡಿದೆ.  ಅಭ್ಯರ್ಥಿ …

ಅಧಿಸೂಚನೆ ಹಾಗೂ ನೀತಿ ಸಂಹಿತೆ ವಿದ್ಯುಕ್ತ ಜ್ಯಾರಿ: ಜಿದ್ದಾಜಿದ್ದಿನ ತ್ರಿಕೋನ ಹೋರಾಟಕ್ಕೆ ಸಜ್ಜಾದ ಕೇರಳ

ತಿರುವನಂತಪುರ: ಕೇರಳ ಸೇರಿದಂತೆ ತಮಿಳುನಾಡು, ಪಶ್ಚಿಮ ಬಂಗಾಳ, ಅಸ್ಸಾಂ ಮತ್ತು ಪುದುಚೇರಿ ಎಂಬೀ ಪಂಚರಾಜ್ಯಗಳ ವಿಧಾನಸಭೆ ಚುನಾವಣಾ ದಿನಾಂಕವನ್ನು ಕೇಂದ್ರ ಚುನಾವಣಾ ಆಯೋಗ ನಿನ್ನೆ ಘೋಷಿಸಿರುವ ಬೆನ್ನಲ್ಲೇ, ಚುನಾವಣೆಯ ವಿದ್ಯುಕ್ತ ಅಧಿಸೂಚನೆಯನ್ನು ಆಯೋಗ ಇಂದು ಪ್ರಕಟಿಸಿದೆ. ಮಾತ್ರವಲ್ಲ ಚುನಾವಣಾ ನೀತಿ ಸಂಹಿತೆಯೂ ಇದರ ಜೊತೆಗೆ ಜ್ಯಾರಿಗೊಂಡಿದೆ. ಕೇರಳದಲ್ಲಿ ಎಡರಂಗ, ಐಕ್ಯರಂಗ ಮತ್ತು ಬಿಜೆಪಿ ನೇತೃತ್ವದ ಎನ್‌ಡಿಎ ನಡುವಿನ ಜಿದ್ದಾಜಿದ್ದಿನ ಹೋರಾಟಕ್ಕೂ ವೇದಿಕೆ ಸಜ್ಜಾಗಿದೆ. ಕೇರಳ ವಿಭಾನ ಸಭೆಯ ಒಟ್ಟು 140 ಕ್ಷೇತ್ರಗಳಿಗೆ ಎಪ್ರಿಲ್ ೯ರಂದು ಏಕ ಹಂತದಲ್ಲೇ …

ಸ್ಕೂಟರ್ ಚಲಾಯಿಸುತ್ತಿದ್ದಂತೆ ಹೃದಯಾಘಾತ: ವ್ಯಕ್ತಿ ಮೃತ್ಯು

ಕುಂಬಳೆ: ಸ್ಕೂಟರ್ ಚಲಾಯಿಸುತ್ತಿದ್ದ ವೇಳೆ ಹೃದಯಾಘಾತ ಸಂಭವಿಸಿ ವ್ಯಕ್ತಿ ಮೃತಪಟ್ಟ ಘಟನೆ ಸಂಭವಿಸಿದೆ. ಬಂಬ್ರಾಣ ಚೂರಿತ್ತಡ್ಕದ ಅಶ್ರಫ್ ಯಾನೆ ಎಳಾಪ ಅಶ್ರಫ್ (58) ಮೃತಪಟ್ಟ ವ್ಯಕ್ತಿ. ನಿನ್ನೆ ಮಧ್ಯಾಹ್ನ ತಲಪ್ಪಾಡಿ ಟೋಲ್ ಗೇಟ್ ದಾಟಿದ ಕೂಡಲೇ ರಾಷ್ಟ್ರೀಯ ಹೆದ್ದಾರಿಯಲ್ಲಿ ಘಟನೆ ಸಂಭವಿಸಿದೆ. ಅಶ್ರಫ್  ಸ್ಕೂಟರ್‌ನಲ್ಲಿ ಮಂಗಳೂರಿಗೆ ತೆರಳುತ್ತಿದ್ದರು. ಟೋಲ್ ಗೇಟ್ ದಾಟಿದ ಕೂಡಲೇ ಹೃದಯಾಘಾತವು ಂಟಾಗಿರುವುದಾಗಿ ಸಂಶಯಿಸಲಾಗುತ್ತಿದೆ. ಸ್ಕೂಟರ್ ರಸ್ತೆಬದಿ ಬಿದ್ದಿದ್ದು ಅಶ್ರಫ್ ಫೂಟ್‌ಪಾತ್‌ನಲ್ಲಿ ಮಲಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಅದನ್ನು ಕಂಡ ಪರಿಸರ ನಿವಾಸಿಗಳು ಅಶ್ರಫ್‌ರನ್ನು ಕೂಡಲೇ  …

ಇಲಿ ವಿಷ ಸೇವಿಸಿ ಚಿಕಿತ್ಸೆಯಲ್ಲಿದ್ದ ಪೆಟ್ರೋಲ್ ಬಂಕ್ ನೌಕರ ಮೃತ್ಯು

ಉಪ್ಪಳ: ಇಲಿ ವಿಷಸೇವಿಸಿ ದೇರಳಕಟ್ಟೆ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಯುವಕ ಮೃತಪಟ್ಟನು. ಉಪ್ಪಳ ಪೆಟ್ರೋಲ್ ಬಂಕ್‌ನ ನೌಕರನೂ,  ಮಂಗಳೂರು ಅಮರ್ ಆಳ್ವ ರಸ್ತೆ,  ಶಾಂತಾ ಆಳ್ವ ಕಂಪೌಂಡ್‌ನ ಆಕೇಶ್ (25) ಮೃತಪಟ್ಟ ವ್ಯಕ್ತಿ.  ಆಕೇಶ್ ಕಳೆದ ಒಂದು ವರ್ಷದಿಂದ ಆರಿಕ್ಕಾಡಿ ಕಾಳಯಲ್ಲಿರುವ ತಾಯಿಯ ಮನೆಯಲ್ಲಿ ವಾಸಿಸುತ್ತಿದ್ದರು.  ಮಾರ್ಚ್ ೬ರಂದು ಬೆಳಿಗ್ಗೆ ಇವರು ಮನೆಯಲ್ಲಿ ಇಲಿವಿಷ ಸೇವಿಸಿ ಅಸ್ವಸ್ಥ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಕೂಡಲೇಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಗೆ ತಲುಪಿಸ ಲಾಗಿತ್ತು.  ಸ್ಥಿತಿ ಗಂಭೀರವಾಗಿದ್ದುದರಿಂದ  ಬಳಿಕ ದೇರಳಕಟ್ಟೆ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಚಿಕಿತ್ಸೆ …

ಅಪ್ರಾಪ್ತರ ವಾಹನ ಚಾಲನೆ: ಮಂಜೇಶ್ವರ ಪೊಲೀಸರಿಂದ ಬಿಗು ತಪಾಸಣೆ; 2 ಸ್ಕೂಟರ್ ವಶ

ಮಂಜೇಶ್ವರ: ದ್ವಿಚಕ್ರ ವಾಹನಗಳನ್ನು ಅಪ್ರಾಪ್ತರು ಚಲಾಯಿಸುತ್ತಿರುವ ಪ್ರಕರಣಗಳು ಹೆಚ್ಚುತ್ತಿದ್ದು, ಪೊಲೀಸರು ವಿವಿಧೆಡೆ ವಾಹನ ತಪಾಸಣೆಯನ್ನು ಬಿಗು ಗೊಳಿಸಿದ್ದಾರೆ. ಇದರಂತೆ ಠಾಣೆಯ ಸಿಐ ಜಿಜೀಶ್ ನಿರ್ದೇಶನದಲ್ಲಿ ಎಸ್‌ಐ ರತೀಶ್, ವೈಷ್ಣವ್ ರಾಮ ಕಾದ್ರನ್, ಉಮೇಶ್ ಕೆ.ಆರ್. ಸಹಿತ ವಿವಿಧ ಅಧಿಕಾರಿಗಳು ಠಾಣಾ ವ್ಯಾಪ್ತಿಯ ವಿವಿಧೆಡೆ ತಪಾಸಣೆ ನಡೆಸುತ್ತಿದ್ದಾರೆ. ಶನಿವಾರ ಸಂಜೆ ಬೇಕೂರು ಮಸೀದಿ ಬಳಿಯ ರಸ್ತೆಯಲ್ಲಿ, ಭಾನುವಾರ ಮುಂಜಾನೆ ತಲಪಾಡಿಯಲ್ಲಿ ವಾಹನ ತಪಾಸಣೆ  ವೇಳೆ ಅಪ್ರಾಪ್ತರು ಚಲಾಯಿಸುತ್ತಿದ್ದ ಎರಡು ಸ್ಕೂಟರ್‌ಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಈ ಸಂಬಂಧ ಬಾಲಕರ ಪೋಷಕರ …

ಮಂಜೇಶ್ವರದಲ್ಲಿ ಪರಶುರಾಂ ಎಕ್ಸ್‌ಪ್ರೆಸ್‌ಗೆ ನಿಲುಗಡೆ: ಕೆ. ಸುರೇಂದ್ರನ್‌ರಿಗೆ ಅಭಿನಂದನೆ

ಮಂಜೇಶ್ವರ: ಪರಶುರಾಂ ಎಕ್ಸ್‌ಪ್ರೆಸ್ ರೈಲಿಗೆ ಮಂಜೇಶ್ವರದಲ್ಲಿ ನಿಲುಗಡೆ ನೀಡಲಾಗಿದ್ದು, ಇಂದು ಬೆಳಿಗ್ಗೆ ನಿಲ್ದಾಣದಲ್ಲಿ ಸ್ವಾಗತ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಬಿಜೆಪಿ ಮಂಡಲ ಅಧ್ಯಕ್ಷ ಆದರ್ಶ್ ಬಿ.ಎಂ, ಹರೀಶ್ಚಂದ್ರ ಮಂಜೇಶ್ವರ, ಪ್ರಶಾಂತ್ ಕುಮಾರ್, ರವಿ ಎಂ.ಕೆ. ಕೋಳ್ಯೂರು, ರಾಮಕೃಷ್ಣ ಭಟ್, ಜಗದೀಶ್, ಭಾಸ್ಕರ ಬಿ.ಎಂ. ಭಾಗವಹಿಸಿದರು. ಕೇಂದ್ರ ರೈಲ್ವೇ ಸಚಿವರಲ್ಲಿ ಕೆ. ಸುರೇಂದ್ರನ್ ಮಾಡಿದ ವಿನಂತಿ ಹಿನ್ನೆಲೆಯಲ್ಲಿ ಮಂಜೇಶ್ವರದಲ್ಲಿ ಪರಶುರಾಂ ಎಕ್ಸ್‌ಪ್ರೆಸ್ ರೈಲಿಗೆ ನಿಲುಗಡೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ನಿಲು ಗಡೆಗಾಗಿ ಯತ್ನಿಸಿದ ಕೆ. ಸುರೇಂದ್ರನ್ ರನ್ನು ಮಂಜೇಶ್ವರದ ಜನತೆ …

ಮಂಜೇಶ್ವರ ಎಡರಂಗದ ಅಭ್ಯರ್ಥಿ ಕೆ.ಆರ್. ಜಯಾನಂದರಿಂದ ಪರ್ಯಟನೆಗೆ ಚಾಲನೆ

ಮಂಜೇಶ್ವರ: ವಿಧಾನಸಭಾ ಕ್ಷೇತ್ರದ ಎಡರಂಗದ ಅಭ್ಯರ್ಥಿ ಕೆ.ಆರ್. ಜಯಾನಂದ ಚುನಾವಣಾ ಪ್ರಚಾರ ಆರಂಭಿಸಿದರು. ಪೈವಳಿಕೆ ಬೋಳಂಗಳದ ಹುತಾತ್ಮ ಮಂಟಪದಿಂದ ನಿನ್ನೆ ಸಂಜೆ ಇವರು ಪರ್ಯಟನೆಗೆ ಚಾಲನೆ ನೀಡಿ ದರು. ಸಿಪಿಎಂ ಏರಿಯಾ ಸಮಿತಿ ಸದಸ್ಯ ಅಬ್ದುಲ್ ರಜಾಕ್ ಚಿಪ್ಪಾರು, ವಿನಯ ಕುಮಾರ್, ಹಾರೀಸ್ ಪೈವಳಿಕೆ, ಪುರುಷೋತ್ತಮ ಬಳ್ಳೂರು, ಚಂದ್ರ ನಾಯ್ಕ್, ಸಿಪಿಐ ಮುಖಂಡ ಅಜಿತ್ ಎಂ.ಸಿ. ಲಾಲ್ಭಾಗ್ ಭಾಗವಹಿಸಿದರು. ಹಿರಿಯ ನೇತಾರ ನಾರಾಯಣ ಶೆಟ್ಟಿ ಕೆ.ಆರ್. ಜಯಾನಂದರನ್ನು ಸ್ವಾಗತಿಸಿದರು. ಸಿಪಿಐ ಮುಖಂಡನಾಗಿದ್ದ ಸಿ.ಕೆ. ಚಿಪ್ಪಾರ್‌ರ ಸ್ಮಾರಕ, ಭಾಸ್ಕರ …

ಕುಟುಂಬ ಕಲಹ: ಅತ್ತೆ ಸೊಸೆಯನ್ನು ಕಡಿದು ಕೊಲೆ

ಮಲಪ್ಪುರಂ: ಕುಟುಂಬ ಕಲಹ ಮುಂದುವರಿದ ಪ್ರಕರಣದಲ್ಲಿ ಅತ್ತೆ ಸೊಸೆಯನ್ನು ಕಡಿದು ಕೊಲೆಗೈದ ಘಟನೆ ನಡೆದಿದೆ. ನಿಲಂಬೂರು ಕರುಳಾಯಿಯಲ್ಲಿ ಇಂದು ಮುಂಜಾನೆ ಘಟನೆ ನಡೆದಿದೆ. ಕೂಟಂಬಾರ ನಿವಾಸಿ ರಜಿತ (30) ಮೃತಪಟ್ಟ ಸೊಸೆ. ಕಟ್ಟಿಗೆ ಕಡಿಯಲು ಉಪಯೋಗಿಸುವ ಕತ್ತಿಯಿಂದ ಕಡಿದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಈ ವೇಳೆ ರಜಿತರ ಪತಿ ಹೊರ ಹೋಗಿದ್ದರೆನ್ನಲಾಗಿದೆ. ಕೊಲೆ ಕೃತ್ಯದ ಬಳಿಕ ಅತ್ತೆ ಶಾಂತಾಳನ್ನು ಪೊಲೀಸರು ಕಸ್ಟಡಿಗೆ ತೆಗೆದಿದ್ದಾರೆ. ಬೊಬ್ಬೆ ಕೇಳಿ ಸ್ಥಳಕ್ಕೆ ತಲುಪಿದ ಸ್ಥಳೀಯರು ರಕ್ತದ ಮಡುವಿನಲ್ಲಿ ಬಿದ್ದಿದ್ದ ರಜಿತಳನ್ನು ಕಂಡಿದ್ದಾರೆ. ಕೂಡಲೇ …

ನರೇಂದ್ರ ಮೋದಿ ಆಡಳಿತ ಜನಸಾಮಾನ್ಯರ ಜೀವನ ಗುಣಮಟ್ಟ ಹೆಚ್ಚಿಸಿತು- ಎಂ.ಎಲ್. ಅಶ್ವಿನಿ

ಕುಂಬಳೆ: ಎಲ್ಲಾ ಕುಟುಂಬಗಳಿಗೂ ಮೂಲಭೂತ ಸೌಕರ್ಯಗಳ ಜೊತೆಗೆ ಆರ್ಥಿಕ ಸೌಲಭ್ಯಗಳು ಲಭಿಸುತ್ತಿದೆ ಎಂದು ಖಚಿತಪಡಿಸುವ ಮೂಲಕ ಭಾರತದ ಕೋಟ್ಯಂತರ ಜನ ಸಾಮಾನ್ಯರ ಜೀವನ ಮಟ್ಟವನ್ನು ನರೇಂದ್ರ ಮೋದಿ ಸರಕಾರ ಹೆಚ್ಚಿಸಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ನುಡಿದರು. ಮಹಿಳಾ ಮೋರ್ಛಾ ಕುಂಬಳೆ ಪಂಚಾಯತ್ ಮಹಿಳಾ ಸಂಗಮ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.  ಕೇರಳಕ್ಕೆ ಸಹಾಯ ಮಾಡಲು ಕೇಂದ್ರ ಸರಕಾರ ಸಿದ್ಧವಾಗಿದ್ದರೂ ಕೂಡಾ ಅದನ್ನು ಪ್ರಯೋಜನಪಡಿಸುವಲ್ಲಿ, ಕೇಂದ್ರದ ಜನಕ್ಷೇಮ ಯೋಜನೆಗಳನ್ನು ಕೇರಳದಲ್ಲಿ ಜ್ಯಾರಿಗೊಳಿಸುವುದರಲ್ಲಿ ಪಿಣರಾಯಿ ವಿಜಯನ್ ಸರಕಾರಕ್ಕೆ ಸಾಧ್ಯವಾಗಿಲ್ಲವೆಂದು …

ಹೋಟೆಲ್ ಮಾಲಕ ನಿಧನ

ಮಂಜೇಶ್ವರ: ಹಿರಿಯ ಹೋಟೆಲ್ ಉದ್ಯಮಿ, ಹೊಸಂಗಡಿ ಪೆಲಪಾಡಿ ನಿವಾಸಿ ಬಿ.ಎಂ. ಮಾಧವ ಸಂಗಂ (74) ಸ್ವ-ಗೃಹದಲ್ಲಿ ನಿಧನ ಹೊಂದಿದರು. ಈ ಹಿಂದೆ ಹೊಸಂಗಡಿ ಪೇಟೆಯಲ್ಲಿ ಸಂಗಂ ಹೋಟೆಲ್ ನಡೆಸುತ್ತಿದ್ದರು. ಸಿಪಿಎಂ ಮಂಜೇಶ್ವರ ಲೋಕಲ್ ಸಮಿತಿ ಸದಸ್ಯನಾಗಿದ್ದರು. ಕನಿಲ ಶ್ರೀ ಭಗವತೀ ಕ್ಷೇತ್ರದ ಬ್ರಹ್ಮಕಲಶ ಸಮಿತಿ, ಮಂಜೇಶ್ವರ ಕೋಟಗಂ ಬಂಗೇರ ತರ ವಾಡಿನ ಗೌರವ ಸಲಹೆಗಾರ, ರಾಮತ್ತ ಮಜಲ್ ರುದ್ರಭೂಮಿ ಅಭಿವೃದ್ಧಿ ಸಮಿತಿ ಮೊದಲಾದವುಗಳಲ್ಲಿ ಸೇವೆ ಸಲ್ಲಿಸಿದ್ದರು. ಮೃತರು ಪತ್ನಿ ವೇದಾವತಿ, ಮಕ್ಕಳಾದ ವಿನಯ ಕುಮಾರ್, ಸಂತೋಷ್, ಸಂದೀಪ್, …