ರಸ್ತೆ ಬದಿಯ ಮರಕ್ಕೆ ಢಿಕ್ಕಿ ಹೊಡೆದು ಕಂದಕಕ್ಕೆ ಮಗುಚಿಬಿದ್ದ ವ್ಯಾನ್: ಚಾಲಕನನ್ನು ಅಪಾಯದಿಂದ ರಕ್ಷಿಸಿದ ನಾಗರಿಕರು
ಬದಿಯಡ್ಕ: ನಿಯಂತ್ರಣ ತಪ್ಪಿದ ಓಮ್ನಿ ವ್ಯಾನ್ ರಸ್ತೆ ಬದಿಯ ಮರಕ್ಕೆ ಢಿಕ್ಕಿ ಹೊಡೆದ ಬಳಿಕ 12 ಅಡಿ ಆಳದ ಕಂದಕಕ್ಕೆ ಮಗುಚಿಬಿದ್ದಿದೆ. ದೀರ್ಘ ಹೊತ್ತು ವ್ಯಾನ್‌ನಲ್ಲಿ ಸಿಲುಕಿಕೊಂಡಿದ್ದ ಚಾಲಕನನ್ನು ನಾಗರಿಕರು ಅತೀ ಸಾಹಸಿಕವಾಗಿ ರಕ್ಷಿಸಿದ್ದಾರೆ. ಬದಿಯಡ್ಕ ವಿದ್ಯಾಗಿರಿ ಬಜದ ಸತ್ಯನಾರಾಯಣ ಭಟ್ (70) ಎಂಬವರನ್ನು ನಾಗರಿಕರು ರಕ್ಷಿಸಿದ್ದಾರೆ. ಬಳಿಕ ಅವರನ್ನು ಕಾಸರಗೋಡಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಇಂದು ಬೆಳಿಗ್ಗೆ 7 ಗಂಟೆ ವೇಳೆ ವಿದ್ಯಾಗಿರಿ ನವಕಾನ ಎಂಬಲ್ಲಿ ಅಪಘಾತವುಂಟಾ ಗಿದೆ. ಶುಗರ್ ತಪಾಸಣೆಗಾಗಿ ಸತ್ಯನಾರಾ ಯಣ ಭಟ್ …